ಉದಯವಾಹಿನಿ, ಅಮೆರಿಕ: ಅಮೆರಿಕದ ಜಾರ್ಜಿಯಾ ರಾಜ್ಯದ ಲಾರೆನ್ಸ್‌ವಿಲ್ಲೆ ನಗರದಲ್ಲಿ ನಡೆದ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಗುಂಡಿನ ದಾಳಿ ನಡೆದಿದ್ದು, ಓರ್ವ ಭಾರತೀಯ ಪ್ರಜೆ ಹಾಗೂ ಅವರ ಮೂವರು ಸಂಬಂಧಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಟ್ಲಾಂಟಾದಲ್ಲಿರುವ ಭಾರತೀಯ ಮಿಷನ್ ಈ ಕುರಿತು ಮಾಹಿತಿ ನೀಡಿದ್ದು, ದಾಳಿ ನಡೆಸಿದ ಭಾರತೀಯ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಸಂತ್ರಸ್ತ ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯವನ್ನು ನೀಡುವುದಾಗಿ ತಿಳಿಸಿದೆ.
ಘಟನೆ ಮಾಹಿತಿ ನೀಡಿದ ಗ್ವಿನ್ನೆಟ್ ಕೌಂಟಿ ಪೊಲೀಸರು, ಶಂಕಿತನನ್ನು ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. ಸಾವನ್ನಪ್ಪಿದವರಲ್ಲಿ ಕುಮಾರ್ ಪತ್ನಿ 43 ವರ್ಷದ ಮೀಮು ಡೊಗ್ರಾ, 33ರ ಗೌರವ್ ಕುಮಾರ್, 37ರ ನಿಧಿ ಚಂದೇರ್, 38ರ ಹರೀಶ್ ಚಂದೇರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಈ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿ ನಡೆಸಿದ ಆರೋಪಿಯನ್ನು ಬಂಧಿಸಲಾಗಿದೆ. ಸಾವನ್ನಪ್ಪಿದವರ ಕುಟುಂಬಕ್ಕೆ ಎಲ್ಲಾ ರೀತಿಯ ಬೆಂಬಲವನ್ನು ನೀಡುವುದಾಗಿ ಅಟ್ಲಾಂಟಾದಲ್ಲಿನ ಭಾರತೀಯ ರಾಯಭಾರ ಕಚೇರಿ ಎಕ್ಸ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.
ಕುಮಾರ್ ವಿರುದ್ಧ ನಾಲ್ಕು ತೀವ್ರತರವಾದ ಹಲ್ಲೆ ಆರೋಪಗಳು, ನಾಲ್ಕು ಕೊಲೆ ಅಪರಾಧಗಳು, ನಾಲ್ಕು ದುರುದ್ದೇಶಪೂರಿತ ಕೊಲೆ ಆರೋಪಗಳು, 1 ನೇ ಡಿಗ್ರಿಯಲ್ಲಿ ಮಕ್ಕಳ ಮೇಲಿನ ಕ್ರೌರ್ಯದ ಒಂದು ಆರೋಪ ಮತ್ತು 3ನೇ ಡಿಗ್ರಿಯಲ್ಲಿ ಮಕ್ಕಳ ಮೇಲಿನ ಕ್ರೌರ್ಯದ ಎರಡು ಆರೋಪಗಳಿವೆ. ಅಟ್ಲಾಂಟಾದಲ್ಲಿರುವ ಕುಮಾರ್ ಮನೆಯಲ್ಲಿ ಮತ್ತು ಅವರ ಪತ್ನಿ ಡೊಗ್ರಾ ನಡುವೆ ಕಲಹ ನಡೆದಿದೆ. ಅವರು ತಮ್ಮ 12 ವರ್ಷದ ಮಗುವಿನೊಂದಿಗೆ ಬ್ರೂಕ್ ಐವಿ ಕೋರ್ಟ್ಗೆ ಸಂಬಂಧಿಕರು ಆಗಮಿಸಿದ್ದರು. ಸಾವನ್ನಪ್ಪಿದ ಗೌರವ್, ನಿಧಿ ಚಂದೇರ್ ಮತ್ತು ಹರೀಶ್ ಚಂದೇರ್ ಅವರ ಸಂಬಂಧಿಕರಾಗಿದ್ದು, ಅವರು ಮನೆಯಲ್ಲಿ ಈ ದಾಳಿ ನಡೆದಿದೆ ಎಂದು ಗ್ವನ್ನೆಟ್ ಕೌಂಟಿ ಪೊಲೀಸರು ಎಕ್ಸ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.ಗುಂಡಿನ ದಾಳಿ ಸಂದರ್ಭದಲ್ಲಿ ಮೂವರು ಮಕ್ಕಳು ಅವರ ಪೋಷಕರ ಜೊತೆ ಇದ್ದು, ಅವರು ಈ ದಾಳಿಯಿಂದ ತಪ್ಪಿಸಿಕೊಂಡು ಅಡಗಿ ಕುಳಿತಿದ್ದರು. ಅದರಲ್ಲಿ ಒಂದು ಮಗು 911ಗೆ ಕರೆ ಮಾಡಿದೆ. ಇದರಿಂದಾಗಿ ಪೊಲೀಸರು ತಕ್ಷಣಕ್ಕೆ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಮಕ್ಕಳಿಗೆ ಯಾವುದೇ ಹಾನಿಯಾಗಿಲ್ಲ. ಆದರೆ, ಈ ಘಟನೆಯಿಂದಾಗಿ ಅವರು ಭಯಗೊಂಡಿದ್ದಾರೆ.
