ಉದಯವಾಹಿನಿ, ವಾಷಿಂಗ್ಟನ್, ಅಮೆರಿಕ: ಅಮೆರಿಕದ ಬಗ್ಗೆ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರ ನಿಲುವು ಹೆಚ್ಚು ದೃಢವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಟ್ರಂಪ್, ತಮ್ಮ ಶಾಂತಿ ಮಂಡಳಿಗೆ ಸೇರಲು ನೀಡಿದ್ದ ಆಹ್ವಾನವನ್ನು ರದ್ದುಗೊಳಿಸಿದ್ದಾರೆ.
ಟ್ರಂಪ್ ಅಧ್ಯಕ್ಷತೆಯಲ್ಲಿ ಹಮಾಸ್ – ಇಸ್ರೇಲ್ ನಡುವಣ ಯುದ್ಧಕ್ಕೆ ಕದನ ವಿರಾಮ ಬಿದ್ದ ಹಿನ್ನೆಲೆಯಲ್ಲಿ ಅದರ ಮೇಲೆ ಕಣ್ಗಾವಲು ಇಡಲು ರಚಿಸಲಾದ ಬೋರ್ಡ್ ಆಫ್ ಪೀಸ್ ಸಮಿತಿಯ ಬಗ್ಗೆ ಅನೇಕ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಅನುಮಾನ ವ್ಯಕ್ತಪಡಿಸುತ್ತಿವೆ. ಆದರೆ, ಈಗ ಅದು ವಿಶ್ವಸಂಸ್ಥೆಗೆ ಪ್ರತಿಸ್ಪರ್ಧಿಯಾಗಬಹುದು ಎಂದು ಸಂದೇಹ ವ್ಯಕ್ತವಾಗುತ್ತಿದ್ದು, ಅನೇಕ ರಾಷ್ಟ್ರಗಳ ನಾಯಕರ ಈ ಬಗ್ಗೆ ತಮ್ಮ ಭೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.
ವಿಶ್ವ ಆರ್ಥಿಕ ವೇದಿಕೆಯಲ್ಲಿ ಕಾಣಿಸಿಕೊಂಡ ಟ್ರಂಪ್, ಸ್ವಿಟ್ಜರ್ಲೆಂಡ್ ಮೇಲೆ ಸುಂಕಗಳನ್ನು ವಿಧಿಸುವ ಬಗ್ಗೆ ಮಾತನಾಡಿದ್ದರು. ಆದರೆ ಈಗ ಅವರು ಅದನ್ನು ಕಡಿಮೆ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್, ಆ ದೇಶದ ನಾಯಕರಿಗೆ ಫೋನ್ ಕರೆ ಮಾಡಿದ ಸಮಯದಲ್ಲಿ ‘ನನ್ನನ್ನು ತಪ್ಪು ರೀತಿಯಲ್ಲಿ ಅರ್ಥಮಾಡಿಕೊಂಡರು’ ಎಂದಿದ್ದಾರೆ. ಯುರೋಪ್‌ನ ಹಲವು ದೇಶಗಳ ಮೇಲೆ ವ್ಯಾಪಕ ತೆರಿಗೆಗಳನ್ನು ಸ್ಥಗಿತಗೊಳಿಸುವ ಮೊದಲು, ಟ್ರಂಪ್ ಡೆನ್ಮಾರ್ಕ್‌ಗೆ ಗ್ರೀನ್‌ಲ್ಯಾಂಡ್‌ನ ಮೇಲೆ ಅಮೆರಿಕಾ ನಿಯಂತ್ರಣಕ್ಕೆ ಒಪ್ಪಿಗೆ ನೀಡಿ ಎಂದು ಹೇಳಿ, ನಾವು ಬಹಳ ಕೃತಜ್ಞರಾಗಿರುತ್ತೇವೆ. ಇಲ್ಲದಿದ್ದರೆ ನಾವು ನೆನಪಿಟ್ಟುಕೊಳ್ಳುತ್ತೇವೆ ಎಂದು ಒತ್ತಾಯಿಸಿದರು. ಇದು NATO ಒಡಂಬಡಿಕೆಗೆ ಅಪಾಯ ತರುತ್ತಿದೆ. ದಾವೋಸ್‌ನಿಂದ ಅಮೆರಿಕಾಕ್ಕೆ ಮರಳಿದ ಅಲಾಸ್ಕಾದ ರಿಪಬ್ಲಿಕನ್ ಸೆನೆಟರ್ ಲಿಸಾ ಮುರ್ಕೌಸ್ಕಿ ಮಾತನಾಡಿದ್ದು, ಮಿತ್ರರಾಷ್ಟ್ರಗಳಲ್ಲಿ ನಾವು ಹೊಸ ಜಾಗತಿಕ ವ್ಯವಸ್ಥೆಗೆ ಪ್ರವೇಶಿಸುತ್ತಿದ್ದೇವೆ ಎಂಬ ಮಾತುಗಳು ಮತ್ತೆ ಮತ್ತೆ ಕೇಳಿಬಂದವು ಒಂದು ಅವ್ಯವಸ್ಥಿತ ಫೋನ್ ಕರೆಯಿಂದಲೇ ನಿಮಗೆ ತೆರಿಗೆಗಳು ಬರುತ್ತವೆ ಎಂಬ ಭಯವಿದೆ. ಈ ಅಸ್ಥಿರತೆ ಮತ್ತು ವಿಶ್ವಾಸಾರ್ಹತೆಯ ಕೊರತೆಯಿಂದ ಸಾಂಪ್ರದಾಯಿಕ ವ್ಯಾಪಾರ ಪಾಲುದಾರರು ಅಮೆರಿಕದ ಬಗ್ಗೆ ಯಾವುದೇ ಭರವಸೆ ಇಲ್ಲ ನಾವು ಮಾತನಾಡೋಣ ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ.
