ಉದಯವಾಹಿನಿ, ಜೈಪುರ : ಪಶ್ಚಿಮ ರಾಜಸ್ಥಾನದ ಖ್ಯಾತ ಧಾರ್ಮಿಕ ಪ್ರವಚನಕಾರ್ತಿ ಸಾಧ್ವಿ ಪ್ರೇಮ್ ಬೈಸಾ ನಿಗೂಢವಾಗಿ ಮೃತಪಟ್ಟಿದ್ದಾರೆ. ಅವರ ನಿಧನವು ಭಾರಿ ಚರ್ಚೆಗೆ ಕಾರಣವಾಗಿದೆ. ಸಾಧ್ವಿಯ ನಿಧನವು ನಿಗೂಢತೆಯಿಂದ ಕೂಡಿರುವುದರಿಂದ ಸಿಬಿಐ (CBI) ತನಿಖೆ ನಡೆಸುವಂತೆ ಆರ್‌ಎಲ್‌ಪಿ ನಾಯಕ ಹಾಗೂ ಜಾಟ್ ಸಮುದಾಯದ ಪ್ರಭಾವಿ ಮುಖಂಡ ಹನುಮಾನ್ ಬೆನಿವಾಲ್ ಆಗ್ರಹಿಸಿದ್ದಾರೆ.
ಬೋರಾನಾಡಾ ಆಶ್ರಮದಿಂದ ಸಾಧ್ವಿ ಪ್ರೇಮ್ ಬೈಸಾ ಅವರನ್ನು ಅವರ ತಂದೆ ವೀರಂ ನಾಥ್ ಹಾಗೂ ಮತ್ತೊಬ್ಬ ಸಹಾಯಕ ಜೋಧಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಅವರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ವೈದ್ಯ ಪ್ರವೀಣ್ ಜೈನ್ ಸಾಧ್ವಿಯನ್ನು ಉಳಿಸಲು ಎಲ್ಲ ಪ್ರಯತ್ನಗಳನ್ನು ನಡೆಸಿದರೂ ಅವರ ದೇಹದಲ್ಲಿ ಯಾವುದೇ ಚಲನವಲನ ಇರಲಿಲ್ಲ ಎಂದು ತಿಳಿಸಿದ್ದಾರೆ. ಸಾಧ್ವಿಯ ತಂದೆಯೂ ಆಗಿರುವ ಅವರ ಗುರು, ಸಾಧ್ವಿಗೆ ಜ್ವರ ಇದ್ದುದರಿಂದ ಆಶ್ರಮಕ್ಕೆ ಒಬ್ಬ ಆರೋಗ್ಯ ಸಿಬ್ಬಂದಿಯನ್ನು ಕರೆಸಲಾಗಿತ್ತು ಎಂದು ಹೇಳಿದ್ದರು ಎಂದು ಡಾಕ್ಟರ್ ಜೈನ್ ತಿಳಿಸಿದ್ದಾರೆ. ಪರೀಕ್ಷಿಸಿದ ನಂತರ ಆ ಆರೋಗ್ಯ ಸಿಬ್ಬಂದಿ ಇಂಜೆಕ್ಷನ್ ನೀಡಿದ್ದು, ಅದರ ಬಳಿಕ ಸಾಧ್ವಿ ಪ್ರಜ್ಞೆ ಕಳೆದುಕೊಂಡಿದ್ದಾಗಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!