ಉದಯವಾಹಿನಿ, ವಡೋದರಾ: ನಾಯಕಿ ಹರ್ಮನ್ ಪ್ರೀತ್ ಕೌರ್ ಸ್ಫೋಟಕ ಫಿಫ್ಟಿ ಬ್ಯಾಟಿಂಗ್ ಹೊರತಾಗಿಯೂ ಗುಜರಾತ್ ಜೈಂಟ್ಸ್ ಮಹಿಳಾ ತಂಡವು ಮುಂಬೈ ಇಂಡಿಯನ್ಸ್ ಮಹಿಳಾ ತಂಡದ (MI Women) ವಿರುದ್ಧ 11 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಇದೇ 4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಆವೃತ್ತಿಯ ಪ್ಲೇ ಆಫ್‌ಗೆ ಗುಜರಾತ್ ಜೈಂಟ್ಸ್ ಎಂಟ್ರಿ ಕೊಟ್ಟಿದೆ.WPL ಅಂಕಪಟ್ಟಿಯಲ್ಲಿ ಸದ್ಯ 8ರಲ್ಲಿ 6 ಪದ್ಯ ಗೆದ್ದಿರುವ ಆರ್‌ಸಿಬಿ 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಜೊತೆಗೆ ಫೈನಲ್ ಪ್ರವೇಶಿಸಿದ ಈ ಆವೃತ್ತಿಯ ಮೊದಲ ತಂಡವಾಗಿದೆ. ಇನ್ನೂ ಸೆಮಿ ಫೈನಲ್‌ಗೆ ಗುಜರಾತ್ ಜೈಂಟ್ಸ್ ಎಂಟ್ರಿಕೊಟ್ಟಿದ್ದು, ಇನ್ನೊಂದು ಸ್ಥಾನಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಪೈಪೋಟಿ ನಡೆಯುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ಶನಿವಾರ ಯುಪಿ ವಾರಿಯರ್ಸ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನಾಡಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಜೆಮಿಮಾ ರೋಡ್ರಿಗ್ಸ್ ನಾಯಕತ್ವದ ಡೆಲ್ಲಿ ಗೆದ್ದರೆ, ಸೆಮಿಸ್‌ಗೆ 2ನೇ ತಂಡವಾಗಿ ಎಂಟ್ರಿ ಕೊಡಲಿದೆ. ಇಲ್ಲದಿದ್ದರೆ, 6 ಅಂಕ ಗಳಿಸಿದ್ದರೂ, ನೆಟ್ ರನ್ ರೇಟ್ ಆಧಾರದ ಮೇಲೆ ಮುಂಬೈ ಇಂಡಿಯನ್ಸ್ ಸೆಮಿಸ್ ಪ್ರವೇಶಿಸಲಿದೆ.
ಶುಕ್ರವಾರ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತ್ತು. ಗೆಲುವಿಗೆ 168 ರನ್ ಗುರಿ ಪಡೆದ ಮುಂಬೈ 7 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಈ ಸೋಲಿನೊಂದಿಗೆ ತನ್ನ ಲೀಗ್ ಸುತ್ತಿನ ಎಲ್ಲಾ ಪಂದ್ಯಗಳನ್ನೂ ಮುಗಿಸಿತು.
