ಉದಯವಾಹಿನಿ, ಮುಂಬೈ: ಚಾರ್ಟೆಡ್ ವಿಮಾನ ದುರಂತದಿಂದ ಅಕಾಲಿಕ ನಿಧನಕ್ಕೀಡಾದ ಮಹಾರಾಷ್ಟ್ರ ಡಿಸಿಎಂ, ಎನ್‌ಸಿಪಿ ನಾಯಕ ಅಜಿತ್ ಪವಾರ್ ಸಾವಿನ ವಿಚಾರದಲ್ಲೂ ರಾಜಕೀಯವಾಗಿತ್ತು. ಇದೀಗ ಪತ್ನಿ ಸುನೇತ್ರಾ ಪವಾರ್‌ಗೆ ತರಾತುರಿಯಲ್ಲಿ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿರೋದು ವ್ಯಾಪಕ ಚರ್ಚೆಗೀಡಾಗಿದೆ.
ಪತಿಯ ಅಂತ್ಯಕ್ರಿಯೆ ಪೂರ್ಣಗೊಳ್ಳುವ ಮೊದಲೇ ಸುನೇತ್ರಾ ಪವಾರ್ ಡಿಸಿಎಂ ಆಗಿ ನೇಮಕಗೊಂಡಿರುವುದರ ಹಿಂದೆ ಬಿಜೆಪಿ ‘ಮಾಸ್ಟರ್ ಮೈಂಡ್’ ಕೈವಾಡ ಇದೆ ಅಂತ ಉದ್ಧವ್ ಶಿವಸೇನೆಯ ಮುಖವಾಣಿಯಾದ ʻಸಾಮ್ನಾʼದ ಸಂಪಾದಕೀಯದಲ್ಲಿ ಬರೆದುಕೊಂಡಿದೆ. ಎನ್‌ಸಿಪಿ ನಾಯಕರಾದ (NCP Leader) ಸುನಿಲ್ ತತ್ಕರೆ ಮತ್ತು ಪ್ರಫುಲ್ ಪಟೇಲ್ ಹಾಗೂ ಬಿಜೆಪಿ ನಾಯಕರಿಗೆ ಎನ್‌ಸಿಪಿಯ 2 ಬಣಗಳು ಒಗ್ಗೂಡುವುದನ್ನು ಬಯಸುವುದಿಲ್ಲ ಎಂದು ಆರೋಪಿಸಿದೆ. ಸುನೇತ್ರಾ ಪ್ರಮಾಣವಚನ ನನಗೆ ತಿಳಿದಿಲ್ಲ ಅಂತ ಅಜಿತ್‌ ಪವಾರ್ ಚಿಕ್ಕಪ್ಪ ಶರದ್ ಪವಾರ್ ಹೇಳಿದ್ದಾರೆ.

ಶರದ್‌ಪವಾರ್, ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಅಥವಾ ಪವಾರ್ ಕುಟುಂಬದ ಇತರ ಸದಸ್ಯರಿಗೆ ಈ ನಡೆಯ ಬಗ್ಗೆ ತಿಳಿದಿರಲಿಲ್ಲ. ಸುನೇತ್ರಾ ಪವಾರ್ ಬಾರಾಮತಿಯಿಂದ ಮುಂಬೈಗೆ ಪ್ರಯಾಣಿಸುತ್ತಿರುವ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ. ಹಾಗಾದರೆ, ಸುನೇತ್ರಾ ಪ್ರಮಾಣ ವಚನ ಸ್ವೀಕರಿಸುವ ನಿರ್ಧಾರ ಯಾರದ್ದು..? ಎಂದು ಸಾಮ್ನಾದಲ್ಲಿ ಪ್ರಶ್ನಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!