ಉದಯವಾಹಿನಿ , ಮುಂಬೈ: ಅಜಿತ್ ಪವಾರ್ ಅವರ ನಿಧನದ ನಂತರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸುನೇತ್ರಾ ಪವಾರ್ ಅವರಿಗೆ ರಾಜ್ಯ ಅಬಕಾರಿ (ಎಕ್ಸೈಸ್), ಕ್ರೀಡೆ ಮತ್ತು ಯುವ ಕಲ್ಯಾಣ, ಅಲ್ಪಸಂಖ್ಯಾತರ ವ್ಯವಹಾರಗಳು ಮತ್ತು ವಕ್ಫ್ ಇಲಾಖೆಗಳ ಜವಾಬ್ದಾರಿ ನೀಡಲಾಗಿದೆ. ಅಜಿತ್ ಪವಾರ್ ಅವರು ಹಿಂದೆ ಹೊಂದಿದ್ದ ಹಣಕಾಸು ಮತ್ತು ಯೋಜನಾ ಇಲಾಖೆಗಳನ್ನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೇ ಉಳಿಸಿಕೊಂಡಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಬಜೆಟ್ ಸಭೆಯಲ್ಲಿ ದೇವೇಂದ್ರ ಫಡ್ನವೀಸ್ ಅವರೇ ಬಜೆಟ್ ಪ್ರಸ್ತುತಪಡಿಸಲಿದ್ದಾರೆ.

‘ದೇವಗಿರಿ’ ಸರ್ಕಾರಿ ನಿವಾಸವೂ ಸುನೇತ್ರಾ ಪವಾರ್‌ಗೆ ಮಲಾಬಾರ್ ಹಿಲ್‌ನಲ್ಲಿರುವ ‘ದೇವಗಿರಿ’ ಸರ್ಕಾರಿ ನಿವಾಸವನ್ನ ಸಹ ಸುನೇತ್ರಾ ಪವಾರ್ ಅವರಿಗೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಈ ವಾರದ ಅಂತ್ಯದ ವೇಳೆಗೆ ಸುನೇತ್ರಾ ಪವಾರ್ ಅವರು ಔಪಚಾರಿಕವಾಗಿ ತಮ್ಮ ಕಚೇರಿಯ ಅಧಿಕಾರ ವಹಿಸಿಕೊಳ್ಳಬಹುದು. ಸುನೇತ್ರಾ ಪವಾರ್ ಅವರಿಗೆ ರಾಜ್ಯ ಕಾರ್ಯಾಲಯದಲ್ಲಿ (ಸೆಕ್ರೆಟೇರಿಯಟ್) ಅವರ ದಿವಂಗತ ಪತಿ ಅಜಿತ್ ಪವಾರ್ ಅವರು ಬಳಸುತ್ತಿದ್ದ ಅದೇ ಕ್ಯಾಬಿನ್‌ಗಳನ್ನು ನೀಡಲಾಗಿದೆ. ರಾಜ್ಯ ಸರ್ಕಾರ ಈ ಕುರಿತು ನಿರ್ಣಯ ತೆಗೆದುಕೊಂಡಿದ್ದು, ಸಾಮಾನ್ಯ ಆಡಳಿತ ಇಲಾಖೆ (ಜಿಎಡಿ) ಸರ್ಕಾರಿ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *

error: Content is protected !!