ಉದಯವಾಹಿನಿ : ವಿಕೆಟ್‌ ಕೀಪರ್‌ ಇಶಾನ್ ಕಿಶನ್ ಅವರ ಭಾರತ ತಂಡಕ್ಕೆ ಮರಳಿದ ಕಥೆ ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ್ದು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗದ ಡಬಲ್ ಸೆಂಚುರಿ ದಾಖಲೆಯನ್ನು ಹೊಂದಿರುವ ಇಶಾನ್, 2024ರಲ್ಲಿ ಬಿಸಿಸಿಐ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದರು. ಆದರೆ ಯುವ ಆಟಗಾರ ದೇಶಿ ಕ್ರಿಕೆಟ್‌ಗೆ ಮರಳಿ, ಕಠಿಣ ಪರಿಶ್ರಮ ಪಟ್ಟು ರನ್ ಮಳೆ ಸುರಿಸಿ ಮತ್ತೆ ಭಾರತ ತಂಡಕ್ಕೆ ಮರಳಿದ್ದಾರೆ. ಅದರಂತೆ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಮತ್ತು 2026ರ ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಅವರಿಗೆ ಮತ್ತೆ ಅವಕಾಶವನ್ನು ನೀಡಲಾಗಿದೆ.

ಭಾರತ ತಂಡಕ್ಕೆ ಮರಳಿದ ಕೂಡಲೇ ಇಶಾನ್ ಕಿಶನ್‌ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದರು. ಮೊದಲ ಮೂರು ಪಂದ್ಯಗಳಲ್ಲಿ ಕ್ರಮವಾಗಿ 76, 28 ಮತ್ತು 103 ರನ್‌ಗಳನ್ನು ಸಿಡಿಸಿ ಗಮನ ಸೆಳೆದರು. ಇದರ ಫಲವಾಗಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಜೊತೆಗೆ ಇನಿಂಗ್ಸ್ ಆರಂಭಿಸುವ ಜವಾಬ್ದಾರಿಯನ್ನು ಇಶಾನ್ ಕಿಶನ್‌ಗೆ ನೀಡಿದರೂ ಅಚ್ಚರಿಯಿಲ್ಲ. ಹಲವು ವರ್ಷಗಳಿಂದ ಭಾರತ ತಂಡದಲ್ಲಿ ಏರಿಳಿತಗಳನ್ನು ಕಾಣುತ್ತಿದ್ದ ಇಶಾನ್ ಕಿಶನ್‌, ಇದೀಗ ಒಳ್ಳೆಯ ಸ್ಥಾನದಲ್ಲಿದ್ದಾರೆ. ಆದರೆ ಕೆಲವು ವರ್ಷಗಳ ಹಿಂದೆ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿತ್ತು. 2021ಕ್ಕೆ ಹಿಂತಿರುಗಿ ನೋಡಿದರೆ, ಮುಂಬೈ ಇಂಡಿಯನ್ಸ್ ಪರ ಇಶಾನ್ ಫಾರ್ಮ್ ಕಳೆದುಕೊಂಡು ಹೀನಾಯ ಸ್ಥಿತಿಯನ್ನು ಅನುಭವಿಸಿದ್ದರು.

Leave a Reply

Your email address will not be published. Required fields are marked *

error: Content is protected !!