ಉದಯವಾಹಿನಿ, ನವದೆಹಲಿ: ಬುಧವಾರ ಸಂಸತ್ತಿನ ಆವರಣದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಅವರ ಮಾಜಿ ಸಹಾಯಕ ಮತ್ತು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ನಡುವೆ ಮಾತಿನ ಚಕಮಕಿ ನಡೆಯಿತು. 2024 ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ಸೇರಿದ ಕಾಂಗ್ರೆಸ್‌ನಿಂದ ಮೂರು ಬಾರಿ ಸಂಸದರಾಗಿದ್ದ ರವನೀತ್ ಬಿಟ್ಟು ಅವರನ್ನು ಗಾಂಧಿಯವರು ತಮ್ಮ “ದೇಶದ್ರೋಹಿ ಸ್ನೇಹಿತ” ಎಂದು ಉಲ್ಲೇಖಿಸಿದರು. ಇದಕ್ಕೆ ಬಿಜೆಪಿ ನಾಯಕಿ ತಕ್ಷಣದ ಮತ್ತು ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿದರು. ಇದಕ್ಕೆ ರಾಹುಲ್ ದೇಶ ಕೆ ದುಷ್ಮನ್” (ರಾಷ್ಟ್ರದ ಶತ್ರು) ಎಂದು ಕರೆದಿದ್ದಾರೆ.
ಮೂರು ಬಾರಿ ಸಂಸದ ಮತ್ತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿರುವ ಬಿಟ್ಟು, 2024 ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದರು. ಪಾರ್ಲಿಮೆಂಟ್ ನ ಪ್ರಮುಖ ದ್ವಾರದ ಬಳಿ ಕಾಂಗ್ರೆಸ್ ಸಂಸದರು ಪ್ರತಿಭಟನೆ ನಡೆಸುತ್ತಿದ್ದಾಗ ಈ ಮಾತಿನ ಚಕಮಕಿ ನಡೆದಿದೆ. ರಾಹುಲ್ ಗಾಂಧಿ, “ಇಲ್ಲಿ ಒಬ್ಬ ದೇಶದ್ರೋಹಿ ನಡೆದುಕೊಂಡು ಹೋಗುತ್ತಿದ್ದಾರೆ. ಅವರ ಮುಖ ನೋಡಿ ಎಂದು ಹೇಳಿ, ಬಿಟ್ಟುಗೆ ಶೇಕ್ ಹ್ಯಾಂಡ್ ಮಾಡುತ್ತಾರೆ. ಹಲೋ, ಬ್ರದರ್ ನನ್ನ ದೇಶದ್ರೋಹಿ ಸ್ನೇಹಿತ. ಚಿಂತೆ ಮಾಡಬೇಡಿ. ಮುಂದೆ ಮತ್ತೆ ಕಾಂಗ್ರೆಸ್ ಗೆ ಬರ್ತೀರಾ ಎಂದಿದ್ದಾರೆ. ಆಗ ಶೇಕ್ ಹ್ಯಾಂಡ್ ಮಾಡದ ಬಿಟ್ಟು, ರಾಹುಲ್ ಗಾಂಧಿಯನ್ನು ದೇಶದ ಶತ್ರು ಅಂತಾ ಕರೆದಿದ್ದಾರೆ.
