ಉದಯವಾಹಿನಿ, ಪಾಕಿಸ್ತಾನ್ ಸೂಪರ್ ಲೀಗ್ ಪ್ರೇಮಿಗಳಿಗೆ ಇದೊಂದು ಸಂಚಲನದ ಸುದ್ದಿ. ಆಸ್ಟ್ರೇಲಿಯಾ ತಂಡದ ಸ್ಟಾರ್ ಬ್ಯಾಟ‌ರ್ ಸ್ಟೀವ್ ಸ್ಮಿತ್ ಮುಂಬರುವ ಪಿಎಸ್ಎಲ್ 11ನೇ ಆವೃತ್ತಿಯಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ವಿಶೇಷವೆಂದರೆ, ಲೀಗ್‌ಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಸಿಯಾಲ್ನೋಟ್ ಸ್ಟಾಲಿಯನ್ಸ್ ಫ್ರಾಂಚೈಸಿ ಪರ ಸ್ಮಿತ್ ಬ್ಯಾಟ್ ಬೀಸಲಿದ್ದಾರೆ.
ವರದಿಗಳ ಪ್ರಕಾರ, ಸಿಯಾಲ್ಯೂಟ್ ಸ್ಟಾಲಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಆಸ್ಟ್ರೇಲಿಯಾದ ಮಾಜಿ ನಾಯಕ ಟಿಮ್ ಪೈನ್ ನೇಮಕಗೊಂಡಿದ್ದಾರೆ. ಪೈನ್ ಅವರ ವಿಶೇಷ ಆಸಕ್ತಿಯ ಮೇರೆಗೆ ಫ್ರಾಂಚೈಸಿಯು ‘ಮಾರ್ಕ್ಯೂ ಪ್ಲೇಯರ್’ ಕೋಟಾದಡಿ ಸ್ಟೀವ್ ಸ್ಮಿತ್ ಅವರನ್ನು ನೇರ ಆಯ್ಕೆಯ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ.
ಕೇವಲ ಆಟಗಾರನಾಗಿ ಮಾತ್ರವಲ್ಲದೆ, ಸಿಯಾಲ್ನೋಟ್ ಸ್ಟಾಲಿಯನ್ಸ್ ತಂಡವನ್ನು ಸ್ಮಿತ್ ಮುನ್ನಡೆಸುವ ಸಾಧ್ಯತೆಗಳು ದಟ್ಟವಾಗಿವೆ. ಇದಕ್ಕೆ ಪ್ರಮುಖ ಕಾರಣ ಅವರ ಯಶಸ್ವಿ ನಾಯಕತ್ವದ ಇತಿಹಾಸ.

Leave a Reply

Your email address will not be published. Required fields are marked *

error: Content is protected !!