ಉದಯವಾಹಿನಿ, ರತ್ಲಂ: ಮಧ್ಯಪ್ರದೇಶದ ರತ್ಲಂ ಜಿಲ್ಲಾ ಕೇಂದ್ರದಿಂದ 18 ಕಿಲೋಮೀಟರ್ ದೂರದಲ್ಲಿರುವ ಒಂದು ಗ್ರಾಮ ರಾಜ್ಯಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಒಂದು ಕಾಲದಲ್ಲಿ ಆಗಾಗ್ಗೆ ಕಳ್ಳತನಗಳಿಗೆ ಹೆಸರುವಾಸಿಯಾಗಿದ್ದ ಗ್ರಾಮ ಈಗ ಕಳ್ಳತನದಿಂದ ಮುಕ್ತವಾಗಿದೆ. ಯುವ ಸರಪಂಚ್​ ತೆಗೆದುಕೊಂಡ ಹೆಜ್ಜೆಯಿಂದಾಗಿ ಗ್ರಾಮವು ಹೈಟೆಕ್ ಆಗಿದೆ. ಕಳ್ಳರು ಸಹ ಈ ಗ್ರಾಮವನ್ನು ಪ್ರವೇಶಿಸಲು ಹೆದರುವಂತಾಗಿದೆ.
ಅಷ್ಟಕ್ಕೂ ನಾವು ಈ ಮಾತನಾಡುತ್ತಿರುವುದು ಸೆಮ್ಲಿಯಾ ಗ್ರಾಮ ಪಂಚಾಯತ್ ಬಗ್ಗೆ. ಹೌದು, ಇಡೀ ಗ್ರಾಮ ಈಗ ಸಿಸಿಟಿವಿ ಕ್ಯಾಮೆರಾಗಳ ಕಣ್​ಗಾವಲಿನಲ್ಲಿದೆ. ಒಂದೇ ಕೊಠಡಿಯಲ್ಲಿ ಕುಳಿತು ಸರಪಂಚರು ಮತ್ತು ಇತರ ಜವಾಬ್ದಾರಿ ಹೊಂದಿದ ಜನರು ಪ್ರತಿಯೊಂದು ಅನುಮಾನಾಸ್ಪದ ಚಟುವಟಿಕೆಯ ಮೇಲೆ ಕಣ್ಣಿಡುತ್ತಾರೆ.

ಹೈಟೆಕ್​ ಐಡಿಯಾ ಬಂದಿದ್ದು ಹೇಗೆ?: ರತ್ಲಂ ಜಿಲ್ಲೆಯಲ್ಲೇ ಹೈಟೆಕ್ ಸಿಸಿಟಿವಿ ಕ್ಯಾಮೆರಾಗಳೊಂದಿಗೆ ಇಷ್ಟು ದೊಡ್ಡ ಪ್ರಮಾಣದ ಭದ್ರತಾ ವ್ಯವಸ್ಥೆ ಹೊಂದಿರುವ ಮೊದಲ ಪಂಚಾಯತ್ ಸೆಮ್ಲಿಯಾ ಗ್ರಾಮ ಪಂಚಾಯತ್ ಆಗಿದೆ. ಸರಪಂಚ್‌ಗಳ ಸಭೆಯಲ್ಲಿ ಸರ್ಕಾರಿ ನಿಧಿ ಮತ್ತು ಸಾರ್ವಜನಿಕ ಬೆಂಬಲದೊಂದಿಗೆ ಗ್ರಾಮ ಪಂಚಾಯತ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಹೇಗೆ ಅಳವಡಿಸಬಹುದು ಎಂಬುದಕ್ಕೆ ಈ ಸೆಮ್ಲಿಯಾ ಗ್ರಾಮ ಪಂಚಾಯತ್​ ಉದಾಹರಣೆ ಆಗಿದೆ. ಪಂಚಾಯತ್ ಕಾರ್ಯದರ್ಶಿ ಮತ್ತು ಜಿಲ್ಲಾ ಮತ್ತು ಜಿಲ್ಲಾ ಪಂಚಾಯತ್‌ನ ಬೆಂಬಲದೊಂದಿಗೆ ಗ್ರಾಮದಲ್ಲಿ 25 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಎಲ್ಲ ಕ್ಯಾಮೆರಾಗಳು ರಾತ್ರಿಯಲ್ಲೂ ಸ್ಪಷ್ಟವಾದ ಚಿತ್ರಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿವೆ ಮತ್ತು ಉತ್ತಮ ಗುಣಮಟ್ಟದ ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯ ಹೊಂದಿವೆ. ಇದು ಈಗ ಗ್ರಾಮದಲ್ಲಿ ಅಪರಾಧ ಚಟುವಟಿಕೆ ಅಥವಾ ಯಾವುದೇ ಅನುಮಾನಾಸ್ಪದ ಘಟನೆಯನ್ನು ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತದೆ.

Leave a Reply

Your email address will not be published. Required fields are marked *

error: Content is protected !!