ಉದಯವಾಹಿನಿ, ಪಾಲಕ್ಕಾಡ್​ (ಕೇರಳ): 100ಕ್ಕೂ ಹೆಚ್ಚು ಬಾಕ್ಸ್ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಪಿಕ್ – ಅಪ್ ವ್ಯಾನ್​ವೊಂದನ್ನು ಕೇರಳದ ಪಾಲಕ್ಕಾಡ್ ಬಳಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಹನದಲ್ಲಿ 100ಕ್ಕೂ ಹೆಚ್ಚು ಬಾಕ್ಸ್‌ಗಳ ಜಿಲೆಟಿನ್ ಸ್ಟಿಕ್‌ಗಳು ಮತ್ತು 20 ಕ್ಕೂ ಹೆಚ್ಚು ಬಾಕ್ಸ್‌ಗಳ ಡಿಟೋನೇಟರ್‌ಗಳು ಪತ್ತೆಯಾಗಿವೆ ಎಂದು ಪಾಲಕ್ಕಾಡ್ ಟೌನ್ ಸೌತ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪೆಟ್ಟಿಗೆಳನ್ನು ಕಲ್ಲಂಗಡಿ ಹಣ್ಣಿನ ಬಾಕ್ಸ್​​ಗಳ ಕೆಳಗೆ ಮರೆ ಮಾಡಿ ಸಾಗಿಸಲಾಗುತ್ತಿತ್ತು.  ವಾಹನ ಮತ್ತು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಪ್ರಾಥಮಿಕ ವಿಚಾರಣೆಯ ಸಮಯದಲ್ಲಿ, ಚಾಲಕನು ಕೊಯಮತ್ತೂರಿನಿಂದ ಪೆಟ್ಟಿಗೆಗಳನ್ನು ಲೋಡ್ ಮಾಡಿ ತ್ರಿಶೂರ್‌ನಲ್ಲಿರುವ ಕ್ವಾರಿಗೆ ಸಾಗಿಸುತ್ತಿದ್ದೆ ಎಂದು ತಿಳಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದರು.

ರಾಜ್ಯಕ್ಕೆ ಅಕ್ರಮವಾಗಿ ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ತರಲಾಗುತ್ತಿದೆ ಎಂಬ ಮಾಹಿತಿ ಪಡೆದ ಪೊಲೀಸರು ವಾಹನಗಳ ತಪಾಸಣೆಯ ಸಮಯದಲ್ಲಿ ಪಿಕ್ ಅಪ್ ವ್ಯಾನ್ ಅನ್ನು ತಡೆದು ತಪಾಸಣೆಗೆ ಒಳಪಡಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಅಡ್ಡಗಟ್ಟಿದಾಗ ಚಾಲಕ ವಾಹನವನ್ನು ನಿಲ್ಲಿಸದೇ ಮುಂದೆ ಸಾಗಿದ್ದು, ಬಳಿಕ ವಾಹನವನ್ನು ಬೆನ್ನಟ್ಟಿ ಹಿಡಿಯಲಾಯಿತು. ಚಾಲಕನ ವಿರುದ್ಧ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!