ಉದಯವಾಹಿನಿ,ಇತ್ತೀಚಿನ ದಿನಗಳಲ್ಇ ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಮಂದಿ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣಗಳು ಕೆಟ್ಟ ಆಹಾರ ಪದ್ಧತಿ, ಅನಾರೋಗ್ಯಕರ ಜೀವನಶೈಲಿ, ಜಡ ಜೀವನಶೈಲಿ ಮತ್ತು ದೈಹಿಕ ಚಟುವಟಿಕೆಯ ಕೊರತೆ. ಬೊಜ್ಜು, ಫ್ಯಾಟಿ ಲಿವರ್, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಆರೋಗ್ಯ ಸಮಸ್ಯೆಗಳು. ಇವೆಲ್ಲವೂ ಹೃದಯದ ಆರೋಗ್ಯದ ಮೇಲೆ ನೇರವಾಗಿ ದಾಳಿ ಮಾಡುತ್ತವೆ. ಹೀಗಾಗಿ ಸಾಕಷ್ಟು ಮಂದಿ ಆರೋಗ್ಯಕರ ಜೀವನಶೈಲಿಯ ವಿಧಾನಗಳನ್ನು ಅನುಸರಿಸಲು ಆರಂಭಿಸಿದ್ದಾರೆ. ಆದರೆ, ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಕೆಲವು ಆಹಾರಗಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇತ್ತೀಚಿಗೆ ಸಂಶೋಧನೆಯೊಂದರ ಪ್ರಕಾರ, ಇವುಗಳನ್ನು ಎರಡು ದಿನಗಳವರೆಗೆ ತಿಂದರೆ ಹಾನಿಕಾರಕ ಕೊಲೆಸ್ಟ್ರಾಲ್ ಅನ್ನು ಬರ್ನ್ ಮಾಡಬಹುದು ಮತ್ತು ಹೃದ್ರೋಗ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು.
ಜರ್ಮನಿಯ ಬಾನ್ ವಿಶ್ವವಿದ್ಯಾಲಯದ ಸಂಶೋಧಕರು ಮೆಟಬಾಲಿಕ್ ಸಿಂಡ್ರೋಮ್ ಹೊಂದಿರುವ 32 ಪುರುಷರು ಮತ್ತು ಮಹಿಳೆಯರ ಮೇಲೆ ಅಧ್ಯಯನ ನಡೆಸಿದರು. ಕೇವಲ 48 ಗಂಟೆಗಳ ಕಾಲ ಓಟ್ ಮೀಲ್ ತಿನ್ನುವುದರಿಂದ ದೇಹದಲ್ಲಿ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್, ಕೆಟ್ಟ ಕೊಲೆಸ್ಟ್ರಾಲ್ ಮಟ್ಟಗಳು ಸುಮಾರು 10 ಪ್ರತಿಶತದಷ್ಟು ಕಡಿಮೆಯಾಗುತ್ತವೆ ಎಂದು ತಿಳಿಸಿದರು. ಆಶ್ಚರ್ಯಕರ ವಿಚಾರವೆಣದರೆ ಕೇವಲ ಎರಡು ದಿನಗಳವರೆಗೆ ತೆಗೆದುಕೊಂಡ ಓಟ್ ಮೀಲ್ ನ ಪರಿಣಾಮವು ಮುಂದಿನ ಆರು ವಾರಗಳವರೆಗೆ ಮುಂದುವರೆಯಿತು. ಮತ್ತೊಂದೆಡೆ, ಮೆಟಾಬಾಲಿಕ್ ಸಿಂಡ್ರೋಮ್ ಗೆ ಕಾರಣವಾಗುವ ಅಧಿಕ ತೂಕ, ಬೊಜ್ಜು, ಅಧಿಕ ಬಿಪಿ, ಹೈ ಬ್ಲಡ್ ಶುಗರ್ ಮತ್ತು ಅಧಿಕ ಕೆಟ್ಟ ಕೊಲೆಸ್ಟ್ರಾಲ್ ಹೃದಯ ಕಾಯಿಲೆ, ಟೈಪ್ 2 ಮಧುಮೇಹ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ಓಟ್ ಮೀಲ್ ಸೇವನೆಯಿಂದ ಈ ಅಪಾಯವು ಗಂಭೀರವಾಗಿ ಕಡಿಮೆ ಮಾಡಬಹುದಾಗಿದೆ.
