ಉದಯವಾಹಿನಿ, ಮಸ್ಕತ್: ಇರಾನ್ ಮತ್ತು ಅಮೆರಿಕ ಇಂದು ಒಮಾನ್‌ನಲ್ಲಿ ಮಾತುಕತೆ ನಡೆಸಲಿವೆ. ಜೂನ್‌ನಲ್ಲಿ ಇಸ್ರೇಲ್ ಮೇಲೆ ಇರಾನ್ 12 ದಿನಗಳ ಯುದ್ಧವನ್ನು ಪ್ರಾರಂಭಿಸಿತ್ತು. ಆದಾದ ಬಳಿಕ ಇರಾನ್ ನಲ್ಲಿ ಭಾರಿ ಪ್ರತಿಭಟನೆಗಳು ಆರಂಭವಾಗಿದ್ದವು. ಈ ನಡುವೆ ಇರಾನ್ – ಅಮೆರಿಕ ಮಾತುಕತೆಗೆ ಮುಂದಾಗಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ವಿಮಾನವಾಹಕ ನೌಕೆಗಳು ಮತ್ತು ಇತರ ಮಿಲಿಟರಿ ವಾಹನಗಳನ್ನು ಕೊಲ್ಲಿಗೆ ಸ್ಥಳಾಂತರಿಸಿದ್ದಾರೆ. ಶಾಂತಿಯುತ ಪ್ರತಿಭಟನಾಕಾರರ ಹತ್ಯೆ ಅಥವಾ ಟೆಹ್ರಾನ್ ಪ್ರತಿಭಟನೆಗಳ ಮೇಲೆ ಸಾಮೂಹಿಕ ಮರಣದಂಡನೆಗಳನ್ನು ವಿಧಿಸಲು ಪ್ರಾರಂಭಿಸಿದರೆ ಇರಾನ್ ಮೇಲೆ ಅಮೆರಿಕ ದಾಳಿ ಮಾಡಲಿದೆ ಎಂದು ಟ್ರಂಪ್ ಈಗಾಗಲೇ ಎಚ್ಚರಿಕೆ ರವಾನಿಸಿದ್ದಾರೆ.
ಕಳೆದ ವರ್ಷ ರೋಮ್ ಮತ್ತು ಮಸ್ಕತ್‌ನಲ್ಲಿ ನಡೆದ ಐದು ಸುತ್ತಿನ ಮಾತುಕತೆಗಳು ಅರ್ಧಕ್ಕೆ ನಿಂತಿವೆ. ಈ ನಡುವೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಗುರುವಾರ ಸಂಜೆ ಅಮೆರಿಕದೊಂದಿಗೆ ಮಾತುಕತೆಗಾಗಿ ಒಮಾನ್‌ಗೆ ತೆರಳಿದ್ದಾರೆ ಎಂದು ಅವರ ವಕ್ತಾರ ಎಸ್ಮಾಯಿಲ್ ಬಘೈ ದೃಢಪಡಿಸಿದ್ದಾರೆ.ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವಿನ ಮಾತುಕತೆಗಳು ಕಳೆದ ಜೂನ್‌ನಲ್ಲಿ ಮುರಿದುಬಿದ್ದಿದ್ದವು. ಮಿಲಿಟರಿ ಕ್ರಮದ ಹೊರತಾಗಿಯೂ ಇರಾನಿನ ಅಧಿಕಾರಿಗಳು ಪರಮಾಣು ವಿಷಯದ ಕುರಿತು ಒಂದು ಗೌರವಾನ್ವಿತ ಒಪ್ಪಂದಕ್ಕೆ ಬರುವ ಆಶಯ ಇಟ್ಟುಕೊಂಡಿದ್ದೇವೆ ಎಂದು ಬಘೈ X ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇರಾನ್ ಹಿತಾಸಕ್ತಿಗಳನ್ನು ಭದ್ರಪಡಿಸಿಕೊಳ್ಳಲು ಮತ್ತು ದೇಶದಲ್ಲಿ ಶಾಂತಿಯನ್ನು ಕಾಪಾಡಲು ಯಾವುದೇ ಅವಕಾಶವನ್ನು ಕಳೆದುಕೊಳ್ಳದಿರುವ ಜವಾಬ್ದಾರಿ ನಮಗಿದೆ ಎಂದು ಬಘೈ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.
