ಉದಯವಾಹಿನಿ, ಜಬಲ್ಪುರ್ (ಮಧ್ಯ ಪ್ರದೇಶ): ಗೋರಖ್‌ಪುರದ 75 ವರ್ಷದ ಗುಲಾಬ್‌ಚಂದ್ ಗುಪ್ತಾ ಎಂಬುವರು ವಿಶಿಷ್ಟವಾದ ಕಲ್ಲುಗಳ ಸಂಗ್ರಹವನ್ನು ಹೊಂದಿದ್ದಾರೆ. ಹಾಗಾಗಿ ಅವರನ್ನು ‘ಕಲ್ಲು ಮನುಷ್ಯ’ ಅಂತಲೇ ಕರೆಯಲಾಗುತ್ತದೆ. ಅವರ ಬಳಿ ನೀರು ಕುಡಿಯುವ ಒಂದು ಕಲ್ಲು ಮತ್ತು ನೈಸರ್ಗಿಕವಾಗಿ ಕೋತಿಯ ಬಾಯಿಯನ್ನು ಹೋಲುವ ಇನ್ನೊಂದು ಕಲ್ಲು ಇದೆ.

ಮಾಜಿ ವಾಟರ್ ಪೋಲೋ ಆಟಗಾರರಾಗಿರುವ ಗುಪ್ತಾ, ಇದೇ ರೀತಿಯ ಹಲವು ವಿಶಿಷ್ಟ ಪಳೆಯುಳಿಕೆಗಳನ್ನು ಸಹ ಹೊಂದಿದ್ದಾರೆ. ವಾಟರ್ ಪೋಲೋ ಆಟಗಾರನಾಗಿ ವೃತ್ತಿಜೀವನದ ಅವಧಿಯಲ್ಲಿ ಅಲ್ಲಲ್ಲಿ ಸಿಕ್ಕ ಅಪರೂಪದ ಹಾಗೂ ವಿಶಿಷ್ಟವಾದ ಕಲ್ಲುಗಳನ್ನು ಸಂಗ್ರಹಿಸುವ ಉತ್ಸಾಹವನ್ನು ಬೆಳೆಸಿಕೊಂಡರು. ಬಳಿಕ ಅದನ್ನೇ ಹವ್ಯಾಸವನ್ನಾಗಿ ಮಾಡಿಕೊಂಡರು.
ಕಲ್ಲಿನ ಮನುಷ್ಯ ಅಂತಲೇ ಫೇಮಸ್​: ಹೀಗೆ ವಿಶಿಷ್ಟವಾದ ಕಲ್ಲುಗಳ ಸಂಗ್ರಹವನ್ನು ಹೊಂದಿರುವ ಗುಲಾಬ್‌ಚಂದ್ ಗುಪ್ತಾ ಅವರನ್ನು ಕಲ್ಲಿನ ಮನುಷ್ಯ ಎಂದು ಕರೆಯಲಾಗುತ್ತದೆ. ಸುಮಾರರು 45 ವರ್ಷಗಳ ಹಿಂದೆ, ನರ್ಮದಾ ನದಿಯ ಜಿಲ್ಹ್ರಿ ಘಾಟ್‌ನಲ್ಲಿ ಈಜುವಾಗ, ಗುಪ್ತಾ ನದಿ ದಂಡೆಯಲ್ಲಿ ವಿಚಿತ್ರವಾದ ಕಲ್ಲುಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಅದೇ ಹವ್ಯಾಸವಾಗಿಬಿಟ್ಟಿತು. ಈಜುವ ಹವ್ಯಾಸವನ್ನು ನೈಸರ್ಗಿಕ ಅದ್ಭುತಗಳ ಅಸಾಧಾರಣ ಸಂಗ್ರಹವನ್ನಾಗಿ ಪರಿವರ್ತಿಸುವಲ್ಲಿ ಅವರು ದಶಕಗಳ ಕಾಲ ಕಳೆದಿದ್ದಾರೆ ಎನ್ನುವುದು ವಿಶೇಷ. ನರ್ಮದಾ ನದಿಯಿಂದ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿರುವ ಕೆಲವು ಕಲ್ಲುಗಳನ್ನು ಸಂಗ್ರಹಿಸಿದ್ದು, ಅದರಲ್ಲಿ ಕೆಲವು ಕಲ್ಲುಗಳು ನೀರನ್ನು ಕುಡಿಯುತ್ತವೆ. ಇನ್ನು ಕೆಲವು ಗೂಬೆಗಳನ್ನು ಹೋಲುವಂತಹ ಮತ್ತು ಇನ್ನು ಕೆಲವು ಕೋತಿಗಳನ್ನು ಹೋಲುವಂತಹ ಕಲ್ಲುಗಳ ಸಂಗ್ರಹ ಹೊಂದಿದ್ದಾರೆ. ಇವೆಲ್ಲವೂ ನೈಸರ್ಗಿಕ ಕಲ್ಲುಗಳಾಗಿದ್ದು, ಅವುಗಳ ವಿಶಿಷ್ಟ ಲಕ್ಷಣಗಳು ಅವುಗಳನ್ನು ವಿಶೇಷವಾಗಿಸುತ್ತವೆ.

Leave a Reply

Your email address will not be published. Required fields are marked *

error: Content is protected !!