ಉದಯವಾಹಿನಿ, ಹೈದರಾಬಾದ್​: ರಂಜಾನ್​ ಆರಂಭಕ್ಕೆ ಇನ್ನೂ ಎರಡು ವಾರ ಬಾಕಿ ಇದೆ. ಆದಾಗಲೇ ಹಲೀಮ್​ ಖಾದ್ಯದ ಸುವಾಸನೆ ಹೈದರಾಬಾದ್​ ನಗರದೆಲ್ಲೆಡೆ ಹರಡಿದೆ. ಹೋಟೆಲ್​, ರೆಸ್ಟೋರೆಂಟ್​ ಮತ್ತು ಹಲೀಮ್​ ಕೇಂದ್ರಗಳಲ್ಲಿ ಖಾದ್ಯಗಳು ಕಂಡು ಬರುತ್ತಿದ್ದು, ಇದು ಹೆಚ್ಚುತ್ತಿರುವ ಬೇಡಿಕೆ ಮತ್ತು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಹೋಟೆಲ್​ ಅಸೋಸಿಯೇಷನ್​ಗಳ ಪ್ರಕಾರ, ಹೈದರಾಬಾದ್​ಲ್ಲಿ ಕಳೆದ ಬಾರಿ ರಂಜಾನ್​ ಸೀಸನ್​ನಲ್ಲಿ ಹಲೀಮ್​ ಉದ್ಯಮವು 800 ಕೋಟಿ ರೂ. ಮೀರಿದ್ದು, ಈ ಬಾರಿ 1,000 ಕೋಟಿ ರೂಪಾಯಿ ದಾಟುವ ನಿರೀಕ್ಷೆ ಇದೆ. ಕಳೆದ ವರ್ಷ, ನಗರದಲ್ಲಿ ಸುಮಾರು 50 ಲಕ್ಷ ಪ್ಲೇಟ್​ ಹಲೀಮ್​ ಅನ್ನು ಮಾರಾಟ ಮಾಡಲಾಗಿದ್ದು, ಈ ವರ್ಷ 60 ಲಕ್ಷ ಪ್ಲೇಟ್​ಗಳ ವಹಿವಾಟಿನ ನಿರೀಕ್ಷೆ ಇದೆ. ಈ ಅಂಕಿಅಂಶ ಬಳಕೆದಾರರು ಸ್ಥಿರವಾಗಿ ಹೆಚ್ಚುತ್ತಿರುವುದನ್ನು ಪ್ರತಿಬಿಂಬಿಸಿದೆ.

ಹೈದರಾಬಾದ್​ ಹಲೀಮ್​ ಬ್ರಾಂಡ್​ ಸೃಷ್ಟಿಸಿದ್ದು, ವರ್ಷದಿಂದ ವರ್ಷಕ್ಕೆ ನಿರಂತರ ಏರಿಕೆ ಕಾಣುತ್ತಿದೆ. ಸ್ಥಳೀಯವಾಗಿ ಮಾತ್ರವಲ್ಲದೆ, ಅಂತಾರಾಜ್ಯ ಮತ್ತು ಸಾಗರೋತ್ತರಗಳಿಂದ ಬೇಡಿಕೆ ಇದೆ. ಈ ವರ್ಷ, ಇದರ ವಹಿವಾಟು 1000 ಕೋಟಿ ರೂಪಾಯಿ ದಾಟುವ ಕುರಿತು ವಿಶ್ವಾಸ ಇದೆ ಎಂದು ಹೋಟೆಲ್​ ಅಸೋಸಿಯೇಷನ್​ ತಿಳಿಸಿದೆ.

ಪ್ರಮುಖ ಹಲೀಂ ಕೇಂದ್ರದಲ್ಲಿ ದಿನಕ್ಕೆ 25ಸಾವಿರ ಕೆಜಿ ಹಲೀಮ್​ಗಳನ್ನು ಸಿದ್ಧ ಮಾಡಲಾಗುತ್ತದೆ. ಸಣ್ಣ ಅಂಗಡಿಗಳಲ್ಲಿ ದಿನಕ್ಕೆ 200 ಕೆಜಿ ತಯಾರಿಸಲಾಗುತ್ತದೆ. ರಂಜಾನ್​ ಅವಧಿಯಲ್ಲಿ ಸಣ್ಣ ಹೋಟೆಲ್​ಗಳಲ್ಲಿ ದಿನಕ್ಕೆ ₹2 ಲಕ್ಷದ ವಹಿವಾಟು ನಡೆಸುವ ಅಂದಾಜಿದೆ.

ಹಲೀಮ್ ಸಿದ್ದಗೊಳಿಸುವುದು ಹೀಗೆ: ಹಲೀಮ್​ ಅನ್ನು 21 ಉತ್ಪನ್ನಗಳಿಂದ ಮಾಡಲಾಗುವುದು. ಇದರ ತಯಾರಿಕೆಯಲ್ಲಿ ಶ್ರಮದಾಯಕ ಮತ್ತು ಸಮಯ ತೆಗೆದುಕೊಳ್ಳುವ ಖಾದ್ಯವಾಗಿದೆ. ಏಲಕ್ಕಿ, ದಾಲ್ಚಿನ್ನಿ, ಲವಂಗ, ಜೀರಿಗೆ, ಕರಿಮೆಣಸು, ಗೋಧಿ ರವೆ, ಬಾಸ್ಮತಿ ಅಕ್ಕಿ, ಉಪ್ಪು, ನಿಂಬೆಹಣ್ಣು, ಹಸಿರು ಮೆಣಸಿನಕಾಯಿಗಳು, ಕೊತ್ತಂಬರಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ತುಪ್ಪ, ಹೆಸರು ಬೇಳೆ, ಉದ್ದಿನ ಬೇಳೆ, ತೊಗರಿ ಬೇಳೆ, ಬಾದಾಮಿ, ಹುರಿದ ಈರುಳ್ಳಿ ಮತ್ತು ಗೋಡಂಬಿ. ಸಂಸ್ಕರಿಸಿದ ಎಣ್ಣೆ, ತುಪ್ಪ, ಗೋಧಿ ಮತ್ತು ಮಟನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಇದರಿಂದಾಗಿ ಇದು ಹೆಚ್ಚಿನ ವೆಚ್ಚಕ್ಕೆ ಕೂಡ ಕಾರಣವಾಗಿದೆ.

ಪ್ರಮುಖ ಹೋಟೆಲ್​ನ ಬಾಣಸಿಗರು ಹೇಳುವಂತೆ, ಹಲೀಮ್ ತಯಾರಿಸಲು ಹಲವು ಗಂಟೆಗಳ ಕಾಲ ಅವುಗಳನ್ನು ಬಾಡಿಸುವುದು ಮುಖ್ಯ. ಇದರ ಮೂಲಕ ಅದರ ರುಚಿಯ ಸಮತೋಲನ ಮಾಡಲಾಗುವುದು. ಇದಕ್ಕೆ ತಾಳ್ಮೆ ಮತ್ತು ಅನುಭವ ಅಗತ್ಯ. ಇದೇ ಕಾರಣಕ್ಕೆ ಹೈದರಾಬಾದ್​ ಹಲೀಂ ಹೆಚ್ಚು ಪ್ರಖ್ಯಾತಿ ಪಡೆದಿದೆ ಎನ್ನುತ್ತಾರೆ.

ಉದ್ಯಮಕ್ಕೆ ಉತ್ತೇಜನ ಮತ್ತು ರಫ್ತು: ಹಲೀಮ್​ ಋತುಮಾನದಲ್ಲಿ ಇದು ಸುಮಾರು ಒಂದು ಲಕ್ಷ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗ ನೀಡುತ್ತದೆ. ಅನೇಕ ಯುವಕರು ದಿನಗೂಲಿಗಾಗಿ ಕಾರ್ಮಿಕರಾಗಿ, ಅಡುಗೆ ಸಹಾಯಕರಾಗಿ, ವಿತರಣೆಯಲ್ಲಿ ಕೆಲಸ ಮಾಡುತ್ತಾರೆ. ಈ ಸಮಯದಲ್ಲಿ ಅವರು ದಿನಕ್ಕೆ 800 ರಿಂದ 1000 ರೂ ವರೆಗೆ ದುಡಿಯುತ್ತಾರೆ.

Leave a Reply

Your email address will not be published. Required fields are marked *

error: Content is protected !!