ಉದಯವಾಹಿನಿ, ಖೋರ್ಧಾ (ಒಡಿಶಾ): ಜೀವನದ ಸವಾಲುಗಳು ನಮ್ಮನ್ನು ಹಲವು ಪರೀಕ್ಷಿಸುತ್ತವೆ. ಕೆಲವರು ತಮ್ಮ ದೃಢಸಂಕಲ್ಪದಿಂದ ಆ ಸವಾಲುಗಳನ್ನು ಗೆದ್ದರೆ, ಇನ್ನು ಕೆಲವರು ಸೋಲುತ್ತಾರೆ. ವೈಜ್ಞಾನಿಕ ಕೃಷಿ ಮಾಡಿ ಗೆದ್ದ ಅಭಿಜಿತ್ ಕರ್ ಅವರು ಮೊದಲ ವರ್ಗಕ್ಕೆ ಸೇರಿದವರು. ಮಾಜಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಇವರು, ಇಂದು ವೈಜ್ಞಾನಿಕ ಕೃಷಿಕ.
ಕೋವಿಡ್ ಸಾಂಕ್ರಾಮಿಕದ ವೇಳೆ ಕೆಲಸ ಕಳೆದುಕೊಂಡ ಅಭಿಜಿತ್, ಹೊಸ ಬದುಕು ಕಟ್ಟಿಕೊಳ್ಳಲು ಕೃಷಿಯನ್ನು ಅವಲಂಬಿಸಿದರು. ಮಣ್ಣಿನ ಬದಲಿಗೆ ಸ್ಪ್ರೆಡ್ ಶೀಟ್ನಲ್ಲಿ ಬೆಳೆ ಬೆಳೆಯುವ ಪದ್ಧತಿಯನ್ನು ಅಳವಡಿಸಿಕೊಂಡರು. ಐದು ವರ್ಷ ಗತಿಸುವಷ್ಟರಲ್ಲಿ ಒಡಿಶಾದ ಅತ್ಯಂತ ಯಶಸ್ವಿ ಹೈಡ್ರೋಪೋನಿಕ್ ರೈತರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. CAಯಿಂದ ಯಶಸ್ವಿ ಕೃಷಿಕ: ಒಡಿಶಾದ ಖೋರ್ಧಾ ಜಿಲ್ಲೆಯ ರೌತ್‌ಪಾಡಾ ನಿವಾಸಿಯಾದ ಅಭಿಜಿತ್ ಅವರು, ಇಂದು ಹೈಟೆಕ್ ಪಾಲಿಹೌಸ್ ಒಳಗೆ ಕೊಕೊ ಪೀಟ್ ಮತ್ತು ತೆಂಗಿನಕಾಯಿ ಸಿಪ್ಪೆಗಳಲ್ಲಿ ಕೆಂಪು, ಹಳದಿ ಮತ್ತು ಹಸಿರು ಕ್ಯಾಪ್ಸಿಕಮ್ಗಳನ್ನು (ದೊಣ್ಣೆ ಮೆಣಸಿನಕಾಯಿ) ಬೆಳೆಯುತ್ತಿದ್ದಾರೆ.
ಅಭಿಜಿತ್ ಅವರ ಕೃಷಿ ಪ್ರಯಾಣವು ಬಿಕ್ಕಟ್ಟಿನಿಂದ ಆರಂಭವಾಯಿತು. ಕೋವಿಡ್ನಿಂದಾಗಿ ಕೆಲಸ ಕಳೆದುಕೊಂಡು ಕುಟುಂಬವನ್ನು ಪೋಷಿಸುವ ಬಗ್ಗೆ ನನಗೆ ಆತಂಕವಿತ್ತು. ಕೃಷಿಯನ್ನು ಪ್ರಾರಂಭಿಸಲು ನಿರ್ಧರಿಸಿದಾಗ ನನ್ನ ಭವಿಷ್ಯದ ಕಾರ್ಯತಂತ್ರವನ್ನು ಪುನರ್ ವಿಮರ್ಶಿಸಲು ಅಕ್ಷರಶಃ ಹೆಣಗಾಡುತ್ತಿದ್ದೆ. ಮಣ್ಣುರಹಿತ ಕೃಷಿಯ ಬಗ್ಗೆ ಕಲಿತ ನಂತರ, ಅದನ್ನು ಜಮೀನಿನಲ್ಲಿ ಪ್ರಯೋಗಿಸಲು ನಿರ್ಧರಿಸಿದೆ” ಎಂದು ಅಭಿಜಿತ್ ಹೇಳಿದರು.
