ಉದಯವಾಹಿನಿ, ಢಾಕಾ: ವಿದ್ಯಾರ್ಥಿ ನಾಯಕ ಒಸ್ಮಾನ್ ಹಾದಿಯ ಹತ್ಯೆ ಪ್ರಕರಣದ ತನಿಖೆಯನ್ನು ವಿಶ್ವಸಂಸ್ಥೆಯ ನೇತೃತ್ವದ ತನಿಖಾ ಸಂಸ್ಥೆ ನಡೆಸಬೇಕೆಂದು ಆಗ್ರಹಿಸಿ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಸಂಜೆ ಮತ್ತೆ ಘರ್ಷಣೆ ಭುಗಿಲೆದ್ದಿದ್ದು ಕನಿಷ್ಠ 40 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಪ್ರತಿಭಟನೆ ನಡೆಸುತ್ತಿದ್ದ ಇಂಕ್ವಿಲಾಬ್ ಮೋರ್ಚಾದ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ ಬಳಿಕ ಅಶ್ರುವಾಯು ಮತ್ತು ಸೌಂಡ್ ಗ್ರೆನೇಡ್‌ಗಳನ್ನು ಪ್ರಯೋಗಿಸಿದರು. ಘರ್ಷಣೆಯಲ್ಲಿ ಕನಿಷ್ಠ 40 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
