ಉದಯವಾಹಿನಿ, ಅಲ್ಫಾ ಚಿತ್ರದ ಟ್ರೈಲರ್ ಲಾಂಚ್ ಮಾಡಿದ ನಟ ರೋರಿಂಗ್ ಸ್ಟಾರ್ ಶ್ರೀ ಮುರಳಿ , ನಾಯಕ ನಟ ಹೇಮಂತ್‌ಗೆ ಕನ್ನಡ ಚಿತ್ರೋದ್ಯಮಕ್ಕೆ ಸ್ವಾಗತ ಕೋರಿದ್ದಾರೆ. ಗೀತ, ಹೊಯ್ಸಳ ಚಿತ್ರಗಳ ಬಳಿಕ ನಿರ್ದೇಶಕ ವಿಜಯ್ ಆಕ್ಷನ್ ಕಟ್ ಹೇಳಿರುವ ʼಆಲ್ಫಾʼ ಟೀಸರ್ ಗಮನ ಸೆಳೆಯುವಂತಿದೆ. ನಾಯಕ ಹೇಮಂತ್ ಕುಮಾರ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಅಲ್ಪಾ’ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಶ್ರೀಮುರಳಿ ಖುಷಿಯಾಗಿದ್ದಾರೆ.
ನಿಮ್ಮ ತಯಾರಿ ನನಗೆ ಗೊತ್ತು, ಡಯೆಟ್ ಮಾಡ್ಕೊಂಡು ಸ್ಕ್ರೀನ್ ಮೇಲೆ ಚೆನ್ನಾಗಿ ಕಾಣೋದು ಇದೊಂದು ಟಾಸ್ಕ್ ಎಂದಿದ್ದಾರೆ. ನಾಯಕಿಗೆ ಗುಡ್ ಲುಕಿಂಗ್.. ಚೆನ್ನಾಗಿ ಕಾಣ್ತೀರ ಎಂದು ಹೇಳಿದ್ದಾರೆ. ಕಾರ್ತಿಕ್ ಮಹೇಶ್‌ಗೆ ನನ್ನ ಕಣ್ಣಲ್ಲಿ ಸ್ಪಾರ್ಕ್ ಕಾಣಿಸ್ತಾ ಇದೆ, ನನ್ನ ಜಡ್ಜ್ಮೆಂಟ್ ಸುಳ್ಳಾಗಲ್ಲ ಎಂದು ಹೇಳಿದರು. ಮ್ಯೂಸಿಕ್ ಡೈರೆಕ್ಟರ್ ಅನೂಪ್ ಸೀಳಿನ್ ಅವರಿಗೆ ವಿಶ್ ಮಾಡುತ್ತಾ ಚೆನ್ನಾಗಿ ಮ್ಯೂಸಿಕ್ ಕೊಟ್ಟಿದ್ದೀರಾ ಎಂದು ಹೇಳಿದರು. ಅಲ್ಫಾ ಸಿನಿಮಾ ಚೆನ್ನಾಗಿದೆ, ಹೀರೋ ಚೆನ್ನಾಗಿ ಕಾಣ್ತಾನೆ, ಕಾರ್ತಿಕ್ ಲುಕ್ ಫ್ಯಾಬುಲಸ್, ಇದೊಂದು ಒಳ್ಳೆ ಟೀಮ್, ನಿರ್ಮಾಪಕರು ಚೆನ್ನಾಗಿ ನೋಡಿದ್ದೀರ ಇದು ಎಲ್ಲರ ಮುಖದಲ್ಲಿ ಕಾಣ್ತಾ ಇದೆ. ನಿರ್ಮಾಪಕರು ತಮ್ಮ ಮಗನನ್ನು ಲಾಂಚ್ ಮಾಡಿದ್ದೀರ, ಹೀಗೆಯೇ ಮುಂದೆ ಹಲವು ಮಂದಿಯನ್ನು ಲಾಂಚ್ ಮಾಡಿ ಎಂದು ಹೇಳಿದರು.
ಹೇಮಂತ್ ಮತ್ತು ಕಾರ್ತಿಕ್ ಮಹೇಶ್ ಅವರನ್ನು ಸ್ಟೇಜ್ ಮೇಲೆ ಕರೆದ ಮುರಳಿ ಅವರು ಅಪ್ಪಿ ಶುಭ ಕೋರಿದ್ದಾರೆ. ಆಲ್ಫಾ ಸಿನಿಮಾ ಆಕ್ಷನ್ ಜೊತೆಗೆ ಅಪ್ಪ ಮತ್ತು ಮಗನ ಭಾವನಾತ್ಮಕ ಸಂಬಂಧ ಚಿತ್ರದ ಹೈಲೈಟ್. ಚಿತ್ರದ ಮೂಲಕ ಹೇಮಂತ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.
ಚಿತ್ರದ ಮೂಲಕ ಆನಂದ್ ಕುಮಾರ್ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದು ‘ಎಲ್ ಎ’ ಬ್ಯಾನರ್‌ನಲ್ಲಿ ಆಲ್ಫಾ ಸಿನಿಮಾ ಮೂಡಿಬರುತ್ತಿದೆ. ನಾಯಕ ಹೇಮಂತ್ ಕುಮಾರ್ ಸಿನಿಮಾಗಾಗಿ ಭರ್ಜರಿ ತಯಾರಿ ಮಾಡಿಕೊಂಡು ಬಂದಿದ್ದಾರೆ. ನಿರ್ದೇಶಕ ಮತ್ತು ನಟ ರಾಘು ಶಿವಮೊಗ್ಗ ಅವರ ಬಳಿ ನಟನಾ ತಯಾರಿ ನಡೆಸಿದ್ದಾರೆ. ಅರ್ಜುನ್ ಜೊತೆ ಸಾಹಸ ಅಭ್ಯಾಸ ಮಾಡಿದ್ರೆ, ಭೂಷಣ್ ಪತ್ನಿ ಬಳಿ ಡಾನ್ಸ್ ಕಲಿತಿದ್ದಾರೆ. ನಟನೆ, ಫೈಟ್, ಡಾನ್ಸ್ ಜೊತೆಗೆ ಮಾರ್ಶಲ್ ಆರ್ಟ್ ಕಲಿತು ನಾಯಕನಾಗಲು ಬೇಕಾಗುವ ಎಲ್ಲಾ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ ಕಾರ್ತಿಕ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ಮತ್ತು ಮಾಸ್ತಿ ಸಂಭಾಷಣೆ ಇದೆ.
