ಉದಯವಾಹಿನಿ, ಪಲ್ಲೆಕೆಲೆ: ದಸೂನ್‌ ಶಾನಕ, ಪವನ್‌ ರತ್ನನಾಯಕೆ ಹಾಗೂ ಕುಸಾಲ್‌ ಮೆಂಡಿಸ್‌ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ಶ್ರೀಲಂಕಾ ತಂಡ, ಒಮಾನ್‌ ವಿರುದ್ಧದ ಪಂದ್ಯದಲ್ಲಿ 105 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 2026ರ ಐಸಿಸಿ ಟಿ20 ವಿಶ್ವಕಪ್‌  ಟೂರ್ನಿಯಲ್ಲಿ ಸತತ ಎರಡು ಗೆಲುವು ಪಡೆದು ಟೂರ್ನಿಯ ಬಿ ಗುಂಪು ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿತು. ಇನ್ನು ಎದುರಾಳಿ ಒಮಾನ್‌ ತಂಡ ಸತತ ಎರಡು ಪಂದ್ಯಗಳ ಸೋಲಿನ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.

ಗುರುವಾರ ಇಲ್ಲಿನ ಪಲ್ಲೆಕ್ಕೆಲೆ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಶ್ರೀಲಂಕಾ ತಂಡ, ಕುಸಾಲ್‌ ಮೆಂಡಿಸ್‌ , ಪವನ್‌ ರತ್ನ ನಾಯಕೆ ಹಾಗೂ ದಸೂನ್‌ ಶಾನಕ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 225 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಒಮಾನ್‌ ತಂಡಕ್ಕೆ 226 ರನ್‌ಗಳ ಕಠಿಣ ಗುರಿಯನ್ನು ನೀಡಿತು.
ಬಳಿಕ ಗುರಿಯನ್ನು ಹಿಂಬಾಲಿಸಿದ ಒಮಾನ್‌ ತಂಡ, ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಮಧ್ಯಮ ಕ್ರಮಾಂಕದಲ್ಲಿ ಮೊಹಮ್ಮದ್‌ ನದೀಮ್‌ (53) ಹಾಗೂ ವಸೀಮ್‌ ಅಲಿ (27) ಅವರನ್ನು ಹೊರತುಪಡಿಸಿ ಇನ್ನುಳಿದವರು ವಿಫಲರಾದರು. ಇದರ ಪರಿಣಾಮ ಒಮಾನ್‌ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 9 ವಿಕೆಟ್‌ಗಳ ನಷ್ಟಕ್ಕೆ 120 ರನ್‌ಗಳಿಗೆ ಸೀಮಿತವಾಯತು. ಆ ಮೂಲಕ ದೊಡ್ಡ ಅಂತರದಲ್ಲಿ ಸೋಲು ಅನುಭವಿಸಿತು.

 

Leave a Reply

Your email address will not be published. Required fields are marked *

error: Content is protected !!