ಉದಯವಾಹಿನಿ, ಬೆಂಗಳೂರು: ಹಿರಿಯ ನಿರ್ದೇಶಕ ಜೊ ಸೈಮನ್ ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಫಿಲ್ಮ್ ಚೇಂಬರ್‌ನಲ್ಲಿ ನಡೆಯುತ್ತಿದ್ದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಜೊ ಸೈಮನ್ ಭಾಗಿಯಾಗಿದ್ದರು. ಸಭೆಯಲ್ಲಿ ಮಾತನಾಡಿದ ಬಳಿಕ ವಾಶ್‌ ರೂಮ್‌ಗೆ ಹೋಗಿದ್ದಾರೆ. ವಾಶ್‌ ರೂಮ್‌ನಲ್ಲಿ ವಾಂತಿ ಮಾಡಿದ ಬಳಿಕ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜೊ ಸೈಮನ್ ಮೃತಪಟ್ಟಿದ್ದಾರೆ.
ವಿಷ್ಣುವರ್ಧನ್ ಅಭಿನಯದ ಸಾಹಸಸಿಂಹ ಚಿತ್ರದ ನಿರ್ದೇಶಕರಾಗಿದ್ದ ಜೊ ಸೈಮನ್ ಸಿಂಹದ ಜೋಡಿ, ನನ್ನ ರೋಷ ನೂರು ವರುಷ, ಮಹಾ ಪ್ರಚಂಡರು, ಸಾಹಸಸಿಂಹ ಸೇರಿದಂತೆ ಹಲವು ಹಿಟ್‌ ಸಿನಿಮಾಗಳನ್ನು ನೀಡಿದ್ದರು. ಮಂಡ್ಯ ಮೂಲದ ಜೊ ಸೈಮನ್ ಆರಂಭದಲ್ಲಿ ಟಚ್ ಅಪ್ ಬಾಯ್, ಸಹಾಯಕ ಮೇಕ್ಅಪ್ ಮ್ಯಾನ್ ಮತ್ತು ಸೆಟ್ ಬಾಯ್ ಆಗಿ ಕೆಲಸ ಮಾಡಿದ್ದರು. ನಂತರ ಅವರು ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಕೆ.ಎಸ್.ಆರ್.ದಾಸ್, ಆರ್.ಎನ್. ಜಯಗೋಪಾಲ್, ಕಣಗಾಲ್ ಪ್ರಭಾಕರ ಶಾಸ್ತ್ರಿ, ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮುಂತಾದ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.ಕರ್ನಾಟಕ ಚಾಲನಚಿತ್ರ ಅಕಾಡೆಮಿ ಜೊ ಸೈಮನ್ ಅವರ ಜೀವಿತಾವಧಿ ಸಾಧನೆ ಗುರುತಿಸಿ 2013 ರಲ್ಲಿ ರಲ್ಲಿ ಬಿ.ಆರ್.ಪಂತುಲು ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

 

Leave a Reply

Your email address will not be published. Required fields are marked *

error: Content is protected !!