ಉದಯವಾಹಿನಿ, ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಇತ್ತೀಚೆಗೆ ಭೂಗತ ಲೋಕದಿಂದ ಜೀವ ಬೆದರಿಕೆ ಬಂದಿದ್ದು, ಇಡೀ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.
ಕಳೆದ ಮಂಗಳವಾರ ರಣವೀರ್ ಸಿಂಗ್ ಅವರ ಮ್ಯಾನೇಜರ್ ಮೊಬೈಲ್‌ಗೆ ಒಂದು ವಾಟ್ಸಾಪ್ ವಾಯ್ಸ್ ನೋಟ್ ಬಂದಿದೆ. ಅದನ್ನು ಕೇಳಿದ ಮ್ಯಾನೇಜರ್ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಆ ವಾಯ್ಸ್ ನೋಟ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ರಣವೀ‌ರ್ ಸಿಂಗ್ ಜೀವಕ್ಕೆ ಕುತ್ತು ತರುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಬರೋಬ್ಬರಿ 1 ಕೋಟಿ ರೂಪಾಯಿ ಹಣವನ್ನು ಬೇಡಿಕೆಯಾಗಿ ಇಟ್ಟಿದ್ದಾನೆ. ಈ ಘಟನೆ ನಡೆದ ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ನಟನ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಮುಂಬೈ ಕ್ರೈಂ ಬ್ರಾಂಚ್‌ಗೆ ಮಹತ್ವದ ಸುಳಿವು ಸಿಕ್ಕಿದೆ. ಆ ವಾಯ್ಸ್ ನೋಟ್‌ನಲ್ಲಿರುವ ಧ್ವನಿ ಬೇರೆ ಯಾರದ್ದೂ ಅಲ್ಲ, ಅದು ಲಾರೆನ್ಸ್ ಬಿಷ್ಟೋಯ್‌ನ ಆಪ್ತ ಸಹಚರ ‘ಹ್ಯಾರಿ ಬಾಕ್ಸ‌ರ್’ನದ್ದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ತನಿಖಾಧಿಕಾರಿಗಳ ಪ್ರಕಾರ, ಈ ಬೆದರಿಕೆ ಸಂದೇಶ ಕಳುಹಿಸಲು ವಿಪಿಎನ್ (VPN) ತಂತ್ರಜ್ಞಾನವನ್ನು ಬಳಸಲಾಗಿದೆ. ಇದರ ಮೂಲವು ವಿದೇಶದಲ್ಲಿದೆ ಎಂದು ಪತ್ತೆ ಹಚ್ಚಲಾಗಿದೆ. ಹ್ಯಾರಿ ಬಾಕ್ಸರ್ ವಿದೇಶದಲ್ಲಿ ಕುಳಿತು ಈ ಸ್ಕೆಚ್ ಹಾಕಿದ್ದಾನೆ ಎಂಬ ಸಂಶಯವಿದ್ದು, ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಈಗ ಇಂಟರ್‌ಪೋಲ್ ಸಹಾಯವನ್ನು ಕೂಡ ಕೋರಿದ್ದಾರೆ. ಸದ್ಯ ಆ ವಾಯ್ಸ್ ನೋಟನ್ನು ಫೋರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು.

Leave a Reply

Your email address will not be published. Required fields are marked *

error: Content is protected !!