ಉದಯವಾಹಿನಿ, ಕೊಲಂವೊ: ಇಂದಿನ ಟಿ20 ವಿಶ್ವಕಪ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವೇಗಿಯೂ ಆಗಿರುವ ಜಿಂಬಾಬ್ವೆ ಆಟಗಾರ ಮುಜರಬಾನಿ ಬ್ಲೆಸ್ಸಿಂಗ್‌ ಅದ್ಭುತ ಪ್ರದರ್ಶನ ನೀಡಿ ಶೈನ್‌ ಆಗಿದ್ದಾರೆ. ಬ್ಲೆಸ್ಸಿಂಗ್‌ ಬೌಲಿಂಗ್‌ ದಾಳಿಗೆ ಆಸ್ಟ್ರೇಲಿಯಾ ತಂಡ ಛಿದ್ರವಾಗಿ ಹೀನಾಯ ಸೋಲು ಕಂಡಿದೆ.
ಹೌದು. 170 ರನ್‌ಗಳ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ ವಿರುದ್ಧ ಮುಜರಬಾನಿಗೆ ಬಿಗಿ ಹಿಡಿತ ಸಾಧಿಸುವ ಮೂಲಕ ತಂಡವನ್ನ ಗೆಲುವಿನತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಪವರ್‌ ಪ್ಲೇ ನಲ್ಲೇ ಜೋಶ್‌ ಇಂಗ್ಲಿಸ್‌, ಟಿಮ್‌ ಡೇವಿಡ್‌ ವಿಕೆಟ್‌ ತೆಗೆದ ಬ್ಲೆಸ್ಸಿಂಗ್‌ ನಿರ್ಣಾಯಕ ಹಂತದಲ್ಲಿ ಮ್ಯಾಟ್ ರೆನ್ಶಾ ವಿಕೆಟ್‌ ಉರುಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದ್ರು. ಒಟ್ಟು 4 ಓವರ್‌ಗಳಲ್ಲಿ ಕೇವಲ 17 ರನ್‌ ಬಿಟ್ಟುಕೊಟ್ಟ ಬ್ಲೆಸ್ಸಿಂಗ್‌ 4 ವಿಕೆಟ್‌ ಪಡೆಯುವ ಮೂಲಕ ಚೊಚ್ಚಲ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ಮುಜರಬಾನಿ ಬ್ಲೆಸ್ಸಿಂಗ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವೇಗಿ ಆಗಿದ್ದಾರೆ. 18ನೇ ಆವೃತ್ತಿಯ ಐಪಿಎಲ್‌ ವೇಳೆ 2025ರ ಮೇ 26 ರಂದು ಬ್ಲೆಸ್ಸಿಂಗ್‌ ಆರ್‌ಸಿಬಿ ತಂಡವನ್ನ ಕೂಡಿಕೊಂಡರು. ಮೆಗಾ ಹರಾಜಿನಲ್ಲಿ ಮುಜರಬಾನಿಗೆ ಅವರನ್ನ ಆರ್‌ಸಿಬಿ ಖರೀದಿಸಿರಲಿಲ್ಲ. ಆದ್ರೆ ಇಂಜುರಿ ಕಾರಣದಿಂದ ಹೊರಗುಳಿದ ಲುಂಗಿ ಎನ್‌ಗಿಡಿ ಅವರ ಬದಲಿಗೆ ಆರ್‌ಸಿಬಿ ಬ್ಲೆಸ್ಸಿಂಗ್‌ರನ್ನ 75 ಲಕ್ಷ ರೂ.ಗೆ ಖರೀದಿ ಮಾಡಿತು.

 

Leave a Reply

Your email address will not be published. Required fields are marked *

error: Content is protected !!