ಉದಯವಾಹಿನಿ, ಶೀಘ್ರದಲ್ಲಿಯೇ ಬೇಸಿಗೆ ಕಾಲ ಆರಂಭವಾಗಲಿದೆ. ಈ ಸೀಸನ್ನಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಾಣಸಿಗುವ ಹಣ್ಣುಗಳಲ್ಲಿ ಕಲ್ಲಂಗಡಿ ಸಹ ಒಂದಾಗಿದೆ. ಬೇಸಿಗೆಯಲ್ಲಿ ಈ ಹಣ್ಣಿಗೆ ಡಿಮ್ಯಾಂಡ್ ಹೆಚ್ಚು. ನೀರಿನ ಅಂಶ ಮತ್ತು ಪ್ರಮುಖ ಖನಿಜಗಳನ್ನು ಒಳಗೊಂಡಿರುವ ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ, ಈ ತಂಪಾದ ಹಣ್ಣು ಎಲ್ಲರ ಆರೋಗ್ಯಕ್ಕೂ ಒಳ್ಳೆಯದಲ್ಲ. ಅದರಲ್ಲೂ ಈ 5 ರೀತಿಯ ಕಾಯಿಲೆಗಳಿರುವವರು ಕಲ್ಲಂಗಡಿ ಹಣ್ಣನ್ನು ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ. ಹಾಗಾದ್ರೆ ಯಾವ ಸಮಸ್ಯೆಗಳಿರುವವರು ಕಲ್ಲಂಗಡಿ ಹಣ್ಣನ್ನು ತಿನ್ನಬಾರದು ಅಂತ ತಿಳಿಯೋಣ ಬನ್ನಿ.
ಮೂತ್ರಪಿಂಡದ ಕಾಯಿಲೆಗಳು: ಮೂತ್ರಪಿಂಡದ ಸಮಸ್ಯೆ ಇರುವವರು ಕಲ್ಲಂಗಡಿ ಹಣ್ಣನ್ನು ತಿನ್ನಬಾರದು. ಏಕೆಂದರೆ ಇದರಲ್ಲಿ ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ. ಯಾವುದಾದರೂ ಮೂತ್ರಪಿಂಡದ ಸಮಸ್ಯೆ ಇದ್ದರೆ, ಅವುಗಳ ಕಾರ್ಯವು ದುರ್ಬಲಗೊಂಡಾಗ, ಅವರು ಪೊಟ್ಯಾಸಿಯಮ್ ಅನ್ನು ಸರಿಯಾಗಿ ಫಿಲ್ಟರ್ ಮಾಡಲು ಸಾಧ್ಯವಾಗುವುದಿಲ್ಲ. ಇದು ದೇಹದಲ್ಲಿ ಪೊಟ್ಯಾಸಿಯಮ್ ಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ಆಯಾಸ, ಸ್ನಾಯು ದೌರ್ಬಲ್ಯ ಮತ್ತು ಹೃದ್ರೋಗ ಸಮಸ್ಯೆಗಳಿಗೆ ಕಾರಣವಾಗಬಹುದು.
ಮೂತ್ರಪಿಂಡದ ಕಾಯಿಲೆ ಇರುವವರು ಹೆಚ್ಚು ಕಲ್ಲಂಗಡಿ ತಿಂದರೆ, ಅದು ದೇಹದಲ್ಲಿ ಎಡಿಮಾ (ಊತ) ಉಂಟು ಮಾಡಬಹುದು. ಇದು ಹೃದಯದ ಲಯಕ್ಕೆ ಹಾನಿಯಾಗುವ ಅಪಾಯವನ್ನೂ ಹೊಂದಿದೆ. ಡಯಾಲಿಸಿಸ್‌ಗೆ ಒಳಗಾಗುವವರು ಕಲ್ಲಂಗಡಿ ತಿನ್ನಬಾರದು. ಮಧುಮೇಹಿಗಳು: ಕಲ್ಲಂಗಡಿಯಲ್ಲಿ ನೈಸರ್ಗಿಕ ಸಕ್ಕರೆ ಅಂಶವಿದೆ. ಇದರ ಗ್ಲೈಸೆಮಿಕ್ ಸೂಚ್ಯಂಕ (GI) ತುಂಬಾ ಹೆಚ್ಚಾಗಿದೆ. ಇದರರ್ಥ ಈ ಹಣ್ಣನ್ನು ತಿಂದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವು ವೇಗವಾಗಿ ಹೆಚ್ಚಾಗುವ ಸಾಧ್ಯತೆಯಿದೆ.
