ಉದಯವಾಹಿನಿ, ಗುವಾಹಟಿ: ದಿಬ್ರುಗಢ ಜಿಲ್ಲೆಯಲ್ಲಿರುವ ಈಶಾನ್ಯದ ಮೊದಲ ತುರ್ತು ಲ್ಯಾಂಡಿಂಗ್ ಫೆಸಿಲಿಟಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಿ-130ಜೆ ವಿಮಾನದಲ್ಲಿ ಬಂದಿಳಿದು ಉದ್ಘಾಟಿಸಿದರು. ಮೋದಿ ಅವರು ಆಗಮಿಸಿದ ನಂತರ ಚಾಬುವಾ ವಾಯುನೆಲೆಯಿಂದ ಹೊರಟು ರಾಷ್ಟ್ರೀಯ ಹೆದ್ದಾರಿ-37 ರ ಮಾರ್ಗದಲ್ಲಿರುವ ಮೊರಾನ್‌ನ ELF ನಲ್ಲಿ ಲ್ಯಾಂಡ್ ಆದರು.
ಪ್ರಧಾನಿ ಉದ್ಘಾಟಿಸಿದ ಮೊರಾನ್ ಬೈಪಾಸ್‌ನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 4.2 ಕಿಮೀ ದೂರ ನಿರ್ಮಿಸಿರುವ ತುರ್ತು ಲ್ಯಾಂಡಿಂಗ್ ಫೆಸಿಲಿಟಿ, ವಾಯು ಪಡೆಯ ಫೈಟರ್ ಜೆಟ್‌ಗಳು ಮತ್ತು ಕಾರ್ಗೋ ವಿಮಾನಗಳಿಗೆ ಕಾರ್ಯತಂತ್ರದ ಮತ್ತು ಬಹು-ಕ್ರಿಯಾತ್ಮಕ ರನ್‌ವೇ ಆಗಿ ಕಾರ್ಯನಿರ್ವಹಿಸುತ್ತದೆ. ರಕ್ಷಣೆ, ಲಾಜಿಸ್ಟಿಕ್ಸ್ ಮತ್ತು ವಿಪತ್ತು ನಿರ್ವಹಣೆ ಪ್ರತಿಕ್ರಿಯೆಯನ್ನು ಬಲಪಡಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತುರ್ತು ಸಂದರ್ಭದಲ್ಲಿ ಆಗಲಿದೆ ಇದರ ಬಳಕೆ: ಅಧಿಕಾರಿಗಳ ಪ್ರಕಾರ, ತುರ್ತು ಲ್ಯಾಂಡಿಂಗ್ ಫೆಸಿಲಿಟಿಯನ್ನು ನಾಗರಿಕ ಮತ್ತು ಮಿಲಿಟರಿ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದ್ದು, ತುರ್ತು ಸಂದರ್ಭದಲ್ಲಿ ದಿಬ್ರುಗಢ ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಎಪಿ ಸಿಂಗ್ ಕೂಡ ಈ ಉದ್ಘಾಟನೆ ವೇಳೆ ಉಪಸ್ಥಿತರಿದ್ದರು. 100 ಕೋಟಿ ರೂ. ಮೌಲ್ಯದ ಈ ಲ್ಯಾಂಡಿಂಗ್ ಸೌಲಭ್ಯವು ಭಾರತೀಯ ವಾಯುಪಡೆಯ (ಐಎಎಫ್) ಯುದ್ಧ ವಿಮಾನಗಳು ಮತ್ತು ಸಾರಿಗೆ ವಿಮಾನಗಳಿಗೆ ಬಹು – ಕ್ರಿಯಾತ್ಮಕ ರನ್‌ವೇ ಆಗಿ ಕಾರ್ಯನಿರ್ವಹಿಸುತ್ತದೆ. ತುರ್ತು ಸಂದರ್ಭಗಳಲ್ಲಿ ದಿಬ್ರುಗಢ ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ಕಾರ್ಯನಿರ್ವಹಿಸುವ ಈ ಸೌಲಭ್ಯವನ್ನು ನಾಗರಿಕ ಮತ್ತು ಮಿಲಿಟರಿ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ.
