ಉದಯವಾಹಿನಿ: ಏಷ್ಯಾ ಖಂಡದಲ್ಲಿ ಮತ್ತೊಂದು ದೊಡ್ಡ ಸಂಘರ್ಷದ ಮುನ್ಸೂಚನೆ ಕಾಣಿಸುತ್ತಿದೆ. ಪ್ರಬಲ ರಾಷ್ಟ್ರಗಳಾದ ಚೀನಾ ಮತ್ತು ಜಪಾನ್ ನಡುವೆ ರಾಜತಾಂತ್ರಿಕ ಉದ್ವಿಗ್ನತೆ ದಿನೇದಿನೇ ಹೆಚ್ಚುತ್ತಿದ್ದು, ಇತ್ತೀಚಿನ ಘಟನೆ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಜಪಾನ್ ತನ್ನ ಆರ್ಥಿಕ ವಲಯದಲ್ಲಿ ಅಕ್ರಮವಾಗಿ ಪ್ರವೇಶಿಸಿದ ಚೀನಾದ ಮೀನುಗಾರಿಕಾ ಹಡಗನ್ನು ವಶಪಡಿಸಿಕೊಂಡಿದೆ.
ಜಪಾನ್ ಅಧಿಕಾರಿಗಳ ಮಾಹಿತಿ ಪ್ರಕಾರ, ನಾಗಸಾಕಿಯಿಂದ ಸುಮಾರು 170 ಕಿಮೀ ದೂರದಲ್ಲಿ ಈ ಹಡಗು ಪತ್ತೆಯಾಯಿತು. ಜಪಾನಿನ ಗಸ್ತು ಹಡಗು “ಹಕುವೊ ಮಾರು” ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ಚೀನಾದ ಹಡಗನ್ನು ತಡೆಹಿಡಿಯಲು ಸೂಚಿಸಿತು. ಆದರೆ ಕ್ಯಾಪ್ಟನ್ ಆದೇಶ ಪಾಲಿಸದೆ ತಪ್ಪಿಸಿಕೊಳ್ಳಲು ಯತ್ನಿಸಿದರು. ಬಳಿಕ ಜಪಾನ್ ಅಧಿಕಾರಿಗಳು ಹಡಗನ್ನು ಹಿಂಬಾಲಿಸಿ, 11 ಸಿಬ್ಬಂದಿಯೊಂದಿಗೆ ವಶಪಡಿಸಿಕೊಂಡರು.
ಈ ಕುರಿತು ಜಪಾನ್ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ a ಪ್ರತಿಕ್ರಿಯಿಸಿ, “ವಿದೇಶಿ ಹಡಗುಗಳಿಂದ ಅಕ್ರಮ ಮೀನುಗಾರಿಕೆಯನ್ನು ತಡೆಯಲು ಇದೇ ರೀತಿಯ ಕಠಿಣ ಕ್ರಮ ಮುಂದುವರಿಯಲಿದೆ” ಎಂದು ಎಚ್ಚರಿಸಿದರು.
ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಬಂಧಿತ ಸಿಬ್ಬಂದಿಯ ಹಕ್ಕುಗಳನ್ನು ಕಾಪಾಡಬೇಕು ಹಾಗೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಚೀನಾ ಈ ಕ್ರಮವನ್ನು ದ್ವಿಪಕ್ಷೀಯ ಮೀನುಗಾರಿಕೆ ಒಪ್ಪಂದಗಳ ಉಲ್ಲಂಘನೆ ಎಂದು ಆರೋಪಿಸಿದೆ.
ಈ ಘಟನೆ ತೈವಾನ್ ವಿಷಯದ ಹಿನ್ನೆಲೆಯಲ್ಲೇ ನಡೆದಿದೆ. 2025ರ ನವೆಂಬರ್‌ನಲ್ಲಿ ಜಪಾನ್ ಪ್ರಧಾನಿ , ಚೀನಾ ತೈವಾನ್ ಮೇಲೆ ದಾಳಿ ಮಾಡಿದರೆ ಜಪಾನ್ ಮಿಲಿಟರಿ ಮಧ್ಯಪ್ರವೇಶಿಸಬಹುದು ಎಂದು ಹೇಳಿದ್ದರು. ಇದರಿಂದ ಚೀನಾ ಆಕ್ರಮಣಕಾರಿ ನಿಲುವು ತಾಳಿದ್ದು, ಜಪಾನ್‌ಗೆ ಪ್ರವಾಸ ಮಾಡಬಾರದೆಂದು ತನ್ನ ನಾಗರಿಕರಿಗೆ ಸೂಚನೆ ನೀಡಿತ್ತು.
