ಉದಯವಾಹಿನಿ: ನಟ ಧನುಷ್ ಅವರು ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನ ಹಾಗೂ ಹೊಸ ಸಿನಿಮಾಗಳಿಂದ ಸುದ್ದಿಯಲ್ಲಿದ್ದರು. ಆದರೆ ಈಗ ‘ಥೆಂಡಾಲ್ ಫಿಲ್ಫ್’ ಎಂಬ ಸಂಸ್ಥೆಯು ಅವರಿಗೆ ಲೀಗಲ್ ನೋಟಿಸ್ ನೀಡುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದೆ.
ಸುಮಾರು 8 ವರ್ಷಗಳ ಹಿಂದೆ ಅಂದರೆ 2016ರಲ್ಲಿ ಧನುಷ್ ಅವರು ‘ನಾನ್ ರುದ್ರನ್’ ಎಂಬ ಸಿನಿಮಾದಲ್ಲಿ ನಟಿಸಲು ಮತ್ತು ನಿರ್ದೇಶಿಸಲು ಈ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.
ಧನುಷ್ ಅವರ ಸೂಚನೆಯಂತೆ ನಿರ್ಮಾಣ ಸಂಸ್ಥೆಯು ಕಥೆಯಲ್ಲಿ ಬದಲಾವಣೆ ಮಾಡಲು ಒಪ್ಪಿಕೊಂಡಿತ್ತು. ಆದರೆ, ಧನುಷ್ ಅವರು ಸಂಪೂರ್ಣ ಚಿತ್ರಕಥೆಯನ್ನು ನೀಡದೆ ಮತ್ತು ಶೂಟಿಂಗ್‌ನಲ್ಲಿ ಭಾಗವಹಿಸದೆ ವಿಳಂಬ ಮಾಡಿದ್ದಾರೆ ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿದೆ.
ಈ ವಿಳಂಬದಿಂದಾಗಿ ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ತಾವು ಹೂಡಿಕೆ ಮಾಡಿದ ಹಣವನ್ನು ವಾಪಸ್‌ ಪಡೆಯಲು ಧನುಷ್ ಅವರು 20 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಸಂಸ್ಥೆ ಪಟ್ಟು ಹಿಡಿದಿದೆ.
ಒಂದು ವೇಳೆ ನಿಗದಿತ ಸಮಯದೊಳಗೆ ಧನುಷ್ ಸ್ಪಂದಿಸದಿದ್ದರೆ ಕಠಿಣ ಕಾನೂನು ಕ್ರಮ ಕೈಗೊವುದಾಗಿ ಸಂಸ್ಥೆ ಎಚ್ಚರಿಕೆ ನೀಡಿದೆ. ಸದ್ಯಕ್ಕೆ ಈ ಬಗ್ಗೆ ಧನುಷ್ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

Leave a Reply

Your email address will not be published. Required fields are marked *

error: Content is protected !!