ಉದಯವಾಹಿನಿ ಭಾರತೀಯ ಚಿತ್ರರಂಗದ ಎರಡು ಮಹಾನ್ ನಟರು ಮತ್ತೆ ಒಂದೇ ಸ್ಟೀನ್ ನಲ್ಲಿ ಕಾಣಿಸಿಕೊಳ್ಳಲಿರುವ ಸುದ್ದಿ ಸಿನಿ ಪ್ರೇಕ್ಷಕರಲ್ಲಿ ಉತ್ಸಾಹ ಮೂಡಿಸಿದೆ. ಸುಮಾರು ಮೂರು ದಶಕಗಳ ಬಳಿಕ ರಜನಿಕಾಂತ್ ಮತ್ತು ಕಮಲ್ ಹಾಸನ್‌ ಒಟ್ಟಿಗೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ವಿಶೇಷವೆಂದರೆ, ಈ ಚಿತ್ರವನ್ನು ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಡ್ ಇಂಟರ್‌ನ್ಯಾಷನಲ್ ನಿರ್ಮಿಸುತ್ತಿದ್ದು, ಅವರು ತಾವೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಮೆಗಾ ಸಿನಿಮಾಕ್ಕಾಗಿ ರಜನಿಕಾಂತ್ ಅವರಿಗೆ ಸುಮಾರು 225 ಕೋಟಿ ರೂ. ಸಂಭಾವನೆ ನೀಡಲಾಗುತ್ತಿದೆ ಎಂಬ ಮಾತು ಕೇಳಿಬಂದಿದೆ. ಚಿತ್ರವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಈ ಜೋಡಿ ಗಿರಫ್ತಾ‌ರ್ ಸಿನಿಮಾದಲ್ಲಿ ಕೊನೆಯದಾಗಿ ಒಂದಾಗಿ ನಟಿಸಿದ್ದರು.

Leave a Reply

Your email address will not be published. Required fields are marked *

error: Content is protected !!