ಉದಯವಾಹಿನಿ: ಟೀಮ್ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ ಕ್ರೀಡಾಂಗಣದಲ್ಲಿ ಅಬ್ಬರಿಸಿದ ಬಳಿಕ ಈಗ ಮತ್ತೆ ಶಾಲೆಯತ್ತ ಮುಖ ಮಾಡಿದ್ದಾರೆ. ಕಡಿಮೆ ವಯಸ್ಸಿನಲ್ಲೇ ಅನೇಕ ಶತಕಗಳನ್ನು ಬಾರಿಸಿ ಎಲ್ಲರ ಗಮನ ಸೆಳೆದಿರುವ ಈ ಪ್ರತಿಭಾವಂತ ಆಟಗಾರ ಈಗ ವಿದ್ಯಾಭ್ಯಾಸಕ್ಕೂ ಸಮಾನ ಮಹತ್ವ ನೀಡುತ್ತಿದ್ದಾರೆ. ಈ ಬಾರಿ ಅವರು ಶಾಲೆಗೆ ಹೋಗುತ್ತಿರುವುದು ಪರೀಕ್ಷೆ ಬರೆಯಲು ಎಂಬುದು ವಿಶೇಷ.
ಅಂಡರ್ 19 ವಿಶ್ವಕಪ್ ಗೆಲುವಿನ ಬಳಿಕ ವಿಶ್ರಾಂತಿಯಲ್ಲಿ ಇದ್ದ ವೈಭವ್, ಫೆಬ್ರವರಿ 17, 2026 ರಿಂದ ಆರಂಭವಾಗುವ 10ನೇ ತರಗತಿ ಮಂಡಳಿ ಪರೀಕ್ಷೆಗೆ ಸಜ್ಜಾಗಿದ್ದಾರೆ. ಬಿಹಾರದ ಸಮಸ್ತಿಪುರದಲ್ಲಿರುವ ಶಾಲೆಯಲ್ಲಿ ಓದುತ್ತಿರುವ ಅವರು ಸಾಮಾನ್ಯ ವಿದ್ಯಾರ್ಥಿಯಂತೆ ಯಾವುದೇ ವಿಶೇಷ ಸೌಲಭ್ಯವಿಲ್ಲದೆ ಪರೀಕ್ಷೆ ಬರೆಯಲಿದ್ದಾರೆ ಎಂದು ಶಾಲಾ ಮುಖ್ಯಸ್ಥರು ತಿಳಿಸಿದ್ದಾರೆ. ಒಟ್ಟು 5 ವಿಷಯಗಳಲ್ಲಿ ಅವರು ಪರೀಕ್ಷೆಗೆ ಹಾಜರಾಗಲಿದ್ದಾರೆ.
