ಉದಯವಾಹಿನಿ: ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಹೀನಾಯ ಸೋಲಿನತ್ತ ಸಾಗುತ್ತಿದ್ದು. ಇಂದು ಕೂಡ ಜಿಂಬಾಬೈ ವಿರುದ್ಧ ಸೋಲು ಅನುಭವಿಸಿದೆ. ಇದರ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ಚರ್ಚೆ ಶುರುವಾಗಿದೆ.
ಅಂದು 2023ರ ಏಕದಿನ ವಿಶ್ವಕಪ್. ಫೈನಲ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ತಂಡ ಟ್ರೋಫಿ ಗೆದ್ದಿತ್ತು. ಇದಾದ ಬಳಿಕ ಡ್ರೆಸಿಂಗ್ ರೂಮ್‌ನಲ್ಲಿ ವಿಶ್ವಕಪ್ ಟ್ರೋಫಿಯನ್ನು ನೆಲದ ಮೇಲೆ ಇಟ್ಟು ಅದರ ಮೇಲೆ ಕಾಲಿಟ್ಟು ಆಟಗಾರರು ಪೋಸ್ ನೀಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಮಿಚೆಲ್ ಮಾರ್ಷ್ ಟ್ರೋಫಿ ಮೇಲೆ ಕಾಲಿಟ್ಟು ಸೋಫಾ ಮೇಲೆ ಕುಳಿತಿದ್ದ ಫೋಟೋಗೆ ಸಾಕಷ್ಟು ಪರ ವಿರೋಧ ಚರ್ಚೆಗೆ ಕಾರಣವಾಗಿತ್ತು.
ಇದೀಗ ಟ್ರೋಫಿಗೆ ಮಾಡಿದ ಅವಮಾನ ಆಸೀಸ್ ಪಾಲಿಗೆ ಶಾಪವಾಗಿ ಪರಿಣಮಿಸಿದೆ ಅನ್ನೋದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ.
2023ರ ವಿಶ್ವಕಪ್‌ನ ಸೆಲಬ್ರೇಷನ್ ವಿವಾದ ಆದ ಬೆನ್ನಲ್ಲಿಯೇ ಪಾಕಿಸ್ತಾನ ವಿರುದ್ಧ ಆಸೀಸ್ ಹಿಂದೆಂದೂ ಆಗದ ರೀತಿಯಲ್ಲಿ ವೈಟ್‌ವಾಷ್ ಎದುರಿಸಿತ್ತು. ಆಡಿದ ಮೂರೂ ಪಂದ್ಯಗಳಲ್ಲಿ ತಂಡ ಸೋಲು ಕಂಡಿತು. ಅದಾದ ಬಳಿಕ ಭಾರತ ವಿರುದ್ಧ ತವರಿನಲ್ಲೇ ನಡೆದ ಏಕದಿನ ಸರಣಿಯಲ್ಲಿ 2-1 ಅಂತರದಲ್ಲಿ ಆಸ್ಟ್ರೇಲಿಯಾ ಸೋಲು ಕಂಡಿತು. ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ 2-1 ಹಾಗೂ ಶ್ರೀಲಂಕಾ ವಿರುದ್ಧ 2-0 ಅಂತರದಲ್ಲಿ ಏಕದಿನ ಸರಣಿಯಲ್ಲಿ ಸೋಲು ಕಂಡಿತು. ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡಿತು. ಬಳಿಕ ನಡೆದಿದ್ದು ಪಾಕಿಸ್ತಾನ ವಿರುದ್ಧ ತವರಿನ ಏಕದಿನ ಸರಣಿ ಇದರಲ್ಲೂ ಆಸ್ಟ್ರೇಲಿಯಾ 1-2 ಅಂತರದಲ್ಲಿ ಸೋಲು ಕಂಡು ನಿರಾಸೆ ಎದುರಿಸಿತು.
