ಉದಯವಾಹಿನಿ, ಬರ್ಫಿಯನ್ನು ಅನೇಕರು ತುಂಬಾ ಇಷ್ಟಪಟ್ಟು ಸೇವಿಸುವ ಸಿಹಿಯಾಗಿದೆ. ನಿಮಗಾಗಿ ನಾವು ತಂದಿರುವ ಬರ್ಫಿಯು ಬಾಯಿಯಲ್ಲಿಟ್ಟರೆ ಬೆಣ್ಣೆಯಂತೆ ಕರಗುತ್ತದೆ. ಬಹುತೇಕರು ಸ್ವೀಟ್​ ಅಂಗಡಿಗಳಿಂದ ಹೆಚ್ಚು ಖರೀದಿಸಿ ತಿನ್ನುತ್ತಾರೆ. ಈ ರೆಸಿಪಿಯನ್ನು ಮನೆಯಲ್ಲಿಯೇ ಸಿದ್ಧಪಡಿಸಬಹುದು. ಮಾರುಕಟ್ಟೆಯಲ್ಲಿ ಉತ್ತಮ ಕ್ಯಾರೆಟ್ ದೊರೆತರೆ ಅರ್ಧ ಕೆಜಿ ತಂದು ಇದನ್ನು ಮನೆಯಲ್ಲೇ ತಯಾರಿಸಿ ತಿನ್ನಬಹುದು. ಈ ರೆಸಿಪಿಯು ಸ್ವೀಟ್ ಶಾಪ್​ನಲ್ಲಿ ಖರೀದಿಸಿದಂತೆ ತುಂಬಾ ರುಚಿಕರವಾಗಿರುತ್ತದೆ.

ಕೆಂಪು ಕ್ಯಾರೆಟ್ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇವು ಕಡಿಮೆ ಬೆಲೆಗೆ ಲಭ್ಯವಿದೆ. ಇಲ್ಲಿ ನೀಡಲಾದ ವಿಧಾನದಲ್ಲಿ ಕ್ಯಾರೆಟ್‌ನೊಂದಿಗೆ ಈ ಸಿಹಿಯನ್ನು ಪ್ರಯತ್ನಿಸಬಹುದು. ಅದುವೇ ಕ್ಯಾರೆಟ್ ಬರ್ಫಿ ರೆಸಿಪಿ. ಈ ವಿಧಾನಗಳನ್ನು ಪಾಲಿಸಿ ರೆಸಿಪಿ ಸಿದ್ಧಪಡಿಸಿದರೆ ತುಂಬಾ ರುಚಿಕರವಾಗಿ ಪರಿಪೂರ್ಣವಾಗಿರುತ್ತವೆ. ಮೊದಲ ಬಾರಿಗೆ ಮಾಡಿದರೂ ಕೂಡ ವಿಳಂಬ ಮಾಡದೇ ಕ್ಯಾರೆಟ್ ಬರ್ಫಿ ತಯಾರಿಸುವುದು ಹೇಗೆ ಎಂಬುದನ್ನು ತಿಳಯೋಣ.

ಕ್ಯಾರೆಟ್ ಬರ್ಫಿಗಾಗಿ ಬೇಕಾಗಿರುವ ಪದಾರ್ಥಗಳೇನು?: ಕ್ಯಾರೆಟ್ – ಅರ್ಧ ಕೆಜಿ, ತುಪ್ಪ – ಕಾಲು ಕಪ್, ಹಾಲು – ಅರ್ಧ ಲೀಟರ್
ಬಾದಾಮಿ – 10, ಗೋಡಂಬಿ – 15, ಒಣ ಕೊಬ್ಬರಿ ತುರಿ – ಕಾಲು ಕಪ್, ಬೆಲ್ಲ – ಅರ್ಧ ಕಪ್
ಸಕ್ಕರೆ – ಕಾಲು ಕಪ್, ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್

ಕುಟುಂಬದ ಎಲ್ಲ ಸದಸ್ಯರಿಗೂ ಇಷ್ಟವಾಗುವಂತಹ ಸಖತ್ ಟೇಸ್ಟಿಯಾದ ಕ್ಯಾರೆಟ್ ಬರ್ಫಿ ಸಿದ್ಧಪಡಿಸಲು ಮೊದಲಿಗೆ ಅರ್ಧ ಕೆಜಿ ಕ್ಯಾರೆಟ್ ತೆಗೆದುಕೊಂಡು ಸ್ವಚ್ಛಗೊಳಿಸಬೇಕಾಗುತ್ತದೆ.
ಕ್ಯಾರೆಟ್​ ಮೇಲಿನ ಸಿಪ್ಪೆ ಸುಲಿದು ತುಂಡುಗಳಾಗಿ ಕತ್ತರಿಸಬೇಕಾಗುತ್ತದೆ. ಬಳಿಕ ಕ್ಯಾರೆಟ್ ತುಂಡುಗಳನ್ನು ಮಿಕ್ಸರ್‌ನಲ್ಲಿ ಹಾಕಿ ಒರಟಾಗಿ ರುಬ್ಬಿಕೊಳ್ಳಬೇಕಾಗುತ್ತದೆ. ಕ್ಯಾರೆಟ್ ತುಂಡುಗಳನ್ನು ಈ ರೀತಿ ರುಬ್ಬಿದ ಬಳಿಕ, ಒಲೆಯ ಮೇಲೆ ಕಡಾಯಿ ಹಾಕಿ ತುಪ್ಪ ಸೇರಿಸಬೇಕಾಗುತ್ತದೆ. ಅದಕ್ಕೆ ತುರಿದ ಕ್ಯಾರೆಟ್ ಅನ್ನು ಸೇರಿಸಿ ಮಧ್ಯಮ ಉರಿಯಲ್ಲಿ ಐದರಿಂದ ಆರು ನಿಮಿಷಗಳ ಕಾಲ ಹುರಿಯಿರಿ, ಬಳಿಕ ಚೆನ್ನಾಗಿ ಮಿಶ್ರಣ ಮಾಡಿ.

Leave a Reply

Your email address will not be published. Required fields are marked *

error: Content is protected !!