ಉದಯವಾಹಿನಿ, ಬಹುತೇಕರು ಹೋಟೆಲ್‌ಗಳು ಇಲ್ಲವೇ ಟಿಫಿನ್ ಸೆಂಟರ್ಗಳಿಗೆ ಹೋದಾಗ ಮೈಸೂರು ಬಜ್ಜಿಯನ್ನು ಆರ್ಡರ್ ಮಾಡುತ್ತಾರೆ. ಕೆಲವರು ಮನೆಯಲ್ಲಿ ಈ ಬಜ್ಜಿಯನ್ನು ಮಾಡಲು ಪ್ರಯತ್ನಿಸುತ್ತಾರೆ. ಆದ್ರೆ, ಅಷ್ಟೊಂದು ಪರಿಪೂರ್ಣವಾಗಿ ಬರುವುದಿಲ್ಲ, ಹಿಟ್ಟು ಒಳಗೆ ಸರಿಯಾಗಿ ಬೇಯುವುದಿಲ್ಲ, ಹೀಗೆ ಏನಾದರೂ ಒಂದು ವ್ಯತ್ಯಾಸವಾಗುತ್ತಲೇ ಇರುತ್ತದೆ.
ಇಲ್ಲಿ ತಿಳಿಸಿದಂತೆ ಈ ಮೈಸೂರು ಬಜ್ಜಿಯನ್ನು ಸರಿಯಾದ ಅಳತೆಗಳು ಮತ್ತು ಉತ್ತಮ ವಿಧಾನಗಳ ಮೂಲಕ ತಯಾರಿಸಿದರೆ ಫರ್ಪೆಕ್ಟ್ ಆಗಿ ಬರುತ್ತದೆ. ಹೋಟೆಲ್ನಲ್ಲಿ ಲಭಿಸುವಂತಹ ಬಜ್ಜಿಯನ್ನು ನೀವು ತಯಾರಿಸಬಹುದು. ಹೌದು, ಅಷ್ಟೊಂದು ಪರಿಪೂರ್ಣವಾಗಿ ಬರುತ್ತದೆ. ಮನೆಯಲ್ಲಿ ಈ ಬಜ್ಜಿಯನ್ನು ತಯಾರಿಸಿದರೆ ಮಕ್ಕಳಿಂದ ಹಿಡದು ಹಿರಿಯರವರೆಗೂ ಹೆಚ್ಚು ಇಷ್ಟಪಟ್ಟು ಸೇವನೆ ಮಾಡುತ್ತಾರೆ. ಇದೀಗ ಮನೆಯಲ್ಲಿ ಸಖತ್ ಟೇಸ್ಟಿಯಾದ ಮೈಸೂರು ಬಜ್ಜಿ ಸರಳವಾಗಿ ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ಅಕ್ಕಿ ಹಿಟ್ಟು – 1 ಕೆಜಿ
ಉಪ್ಪು – 1.5 ಟೀಸ್ಪೂನ್
ಅಡುಗೆ ಸೋಡಾ – 1 ಟೀಸ್ಪೂನ್
ಮೊಸರು – 1/2 ಲೀಟರ್
ಜೀರಿಗೆ – 1 ಟೀಸ್ಪೂನ್
ಎಣ್ಣೆ – 3 ಟೀಸ್ಪೂನ್
ಹಸಿ ಮೆಣಸಿನಕಾಯಿ ಪೇಸ್ಟ್ – 2 ಟೀಸ್ಪೂನ್
ಶುಂಠಿ ಪೇಸ್ಟ್ – 2 ಟೀಸ್ಪೂನ್
ಎಣ್ಣೆ – ಡೀಪ್ ಫ್ರೈ ಮಾಡಲು ಬೇಕಾದಷ್ಟು
ತುಂಬಾ ರುಚಿಕರವಾದ ಮೈಸೂರು ಬಜ್ಜಿಯನ್ನು ತಯಾರಿಸಲು ಮೊದಲಿಗೆ ಒಂದು ಬೌಲ್ನಲ್ಲಿ 1.5 ಟೀಸ್ಪೂನ್ ಉಪ್ಪು, 1 ಟೀಸ್ಪೂನ್ ಅಡುಗೆ ಸೋಡಾ ಮತ್ತು 1/2 ಲೀಟರ್ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
1 ಟೀಸ್ಪೂನ್ ಜೀರಿಗೆ, 2 ಟೀಸ್ಪೂನ್ ಹಸಿ ಮೆಣಸಿನಕಾಯಿ ಪೇಸ್ಟ್ ಸೇರಿಸಿ. ಅದೇ ರೀತಿಯಾಗಿ 2 ಟೀಸ್ಪೂನ್ ಶುಂಠಿ ಪೇಸ್ಟ್, 3.5 ಲೀಟರ್ ನೀರು ಸೇರಿಸಿ ಮಿಶ್ರಣ ಮಾಡಿಕೊಳ್ಳಿ.
