ಉದಯವಾಹಿನಿ, ನವದೆಹಲಿ: ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ಹಾದಿಯಲ್ಲಿರುವ ಹಿರಿಯ ವೇಗಿ ಮೊಹಮ್ಮದ್‌ ಶಮಿ  ಅವರು ಬಂಗಾಳ ತಂಡದ ಪರ 2025-26ರ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದ್ದಾರೆ ಹಾಗೂ ಉತ್ತಮ ಪ್ರದರ್ಶನವನ್ನು ತೋರುತ್ತಿದ್ದಾರೆ. ಇದೀಗ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಸೆಮಿಫೈನಲ್‌ (JK vs BEN) ಪಂದ್ಯದಲ್ಲಿಯೂ ಮಾರಕ ದಾಳಿ ನಡೆಸಿದ ಮೊಹಮ್ಮದ್‌ ಶಮಿ, 8 ವಿಕೆಟ್‌ಗಳನ್ನು ಕಬಳಿಸಿ ಬಿಸಿಸಿಐ ಚೀಪ್‌ ಸೆಲೆಕ್ಟರ್‌ ಅಜಿತ್‌ ಅಗರ್ಕರ್‌ಗೆ ಬಲವಾದ ಸಂದೇಶವನ್ನು ರವಾನಿಸಿದ್ದಾರೆ. ಆ ಮೂಲಕ ತಾನು ರಾಷ್ಟ್ರೀಯ ತಂಡದ ಪರ ಆಡಲು ಸಿದ್ದ ಎಂಬ ಮಾತನ್ನು ಆಟದಲ್ಲಿ ತೋರಿಸಿದ್ದಾರೆ.

ಬಂಗಾಳ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಮಾರಕ ಬೌಲಿಂಗ್‌ ದಾಳಿ ನಡೆಸಿದ ಮೊಹಮ್ಮದ್‌ ಶಮಿ, ಜಮ್ಮು ಮತ್ತು ಕಾಶ್ಮೀರ ತಂಡದ ಬ್ಯಾಟಿಂಗ್‌ ವಿಭಾಗವನ್ನು ಸಂಪೂರ್ಣವಾಗಿ ಛಿದ್ರಗೊಳಿಸಿದರು. 59ನೇ ಓವರ್‌ನಲ್ಲಿ ಶಮಿ 5 ವಿಕೆಟ್‌ ಸಾಧನೆ ಮಾಡಿದರು. ಕನ್ನಯ್ಯ ವಾದಾವನ್‌ ಅವರನ್ನು ಔಟ್‌ ಮಾಡಿದ ಬಳಿಕ ಶಮಿ 5 ವಿಕೆಟ್‌ ಪೂರ್ಣಗೊಳಿಸಿದರು. ನಂತರ ಇನ್ನು ಮೂರು ವಿಕೆಟ್‌ ಪಡೆಯುವ ಮೂಲಕ 8 ವಿಕೆಟ್‌ ಸಾಧನೆಯನ್ನು ಮಾಡಿದರು. ಆ ಮೂಲಕ ದೇಶಿ ಕ್ರಿಕೆಟ್‌ನಲ್ಲಿ ತಮ್ಮ ಫಾರ್ಮ್‌ ಅನ್ನು ಮುಂದುವರಿಸಿದರು. ಇವರು ರಣಜಿ ಟ್ರೋಫಿ ಟೂರ್ನಿಯುದ್ದಕ್ಕೂ ನಿಯಮಿತವಾಗಿ ಬೌಲ್‌ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!