ಉದಯವಾಹಿನಿ, ಕೊಲಂಬೋ: ಆಸ್ಟ್ರೇಲಿಯಾವನ್ನು ಮಣಿಸಿದ್ದ ಜಿಂಬಾಬ್ವೆ ಈಗ ತವರಿನಲ್ಲೇ ಶ್ರೀಲಂಕಾವನ್ನು ಮಣಿಸಿ ಬಿಗ್ ಶಾಕ್ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಶ್ರೀಲಂಕಾ 7 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಜಿಂಬಾಬ್ವೆ ಇನ್ನೂ 3 ಎಸೆತ ಬಾಕಿ ಇರುವಂತೆಯೇ 4 ವಿಕೆಟ್ ನಷ್ಟಕ್ಕೆ 182 ರನ್ ಹೊಡೆದು 6 ವಿಕೆಟ್‌ಗಳ ಜಯ ಸಾಧಿಸಿತು. ಈ ಗೆಲುವು ಸಾಧ್ಯವಾಗಿದ್ದು ನಾಯಕ ಸಿಕಂದರ್ ರಾಜಾ ( ಅವರ ಸ್ಫೋಟಕ ಆಟ ಮತ್ತು ಓಪನರ್ ಬ್ರಿಯಾನ್ ಬೆನೆಟ್ ಅವರ ತಾಳ್ಮೆಯ ಅರ್ಧಶತಕದಿಂದ. ಬ್ರಿಯಾನ್ ಬೆನೆಟ್ ಔಟಾಗದೇ 63 ರನ್(48 ಎಸೆತ, 8 ಬೌಂಡರಿ) ಹೊಡೆದರೆ ಸಿಕಂದರ್ ರಾಜಾ 45 ರನ್(26 ಎಸೆತ, 2 ಬೌಂಡರಿ, 4 ಸಿಕ್ಸ್) ಹೊಡೆದಿದ್ದರಿಂದ ಜಿಂಬಾಬ್ವೆ ಗೆಲುವು ಸಾಧಿಸಿದೆ.
ಲಂಕಾ ಪರವಾಗಿ ಆರಂಭಿಕ ಆಟಗಾರ ನಿಸ್ಸಾಂಕ 62 ರನ್(41 ಎಸೆತ,8 ಬೌಂಡರಿ) ಹೊಡೆದರೆ ಪವನ್ ರತ್ನನಾಯಕೆ 44 ರನ್(25 ಎಸೆತ, 3 ಬೌಂಡರಿ, 2 ಸಿಕ್ಸ್) ಹೊಡೆದು ಔಟಾದರು.
ಶ್ರೀಲಂಕಾವನ್ನು ಮಣಿಸುವ ಮೂಲಕ ಜಿಂಬಾಬ್ವೆ ಬಿ ಗ್ರೂಪ್‌ನಲ್ಲಿ 7 ಅಂಕ ಸಂಪಾದಿಸಿ ಅಗ್ರಸ್ಥಾನಕ್ಕೆ ಜಿಗಿದಿದೆ. ಆಸ್ಟ್ರೇಲಿಯಾ ಮತ್ತು ಒಮಾನ್ ವಿರುದ್ಧ ಗೆದ್ದು 2 ಅಂಕ ಪಡೆದಿದ್ದ ಜಿಂಬಾಬ್ವೆಗೆ ನೆದರ್‌ಲ್ಯಾಂಡ್ಸ್ ವಿರುದ್ಧ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಹೀಗಾಗಿ ಇತ್ತಂಡಗಳಿಗೆ ತಲಾ ಒಂದೊಂದು ಅಂಕವನ್ನು ಹಂಚಿಕೆ ಮಾಡಲಾಗಿತ್ತು. ಜಿಂಬಾಬ್ವೆ 7 ಅಂಕ ಪಡೆದರೆ 3 ಪಂದ್ಯ ಗೆದ್ದು ಒಂದು ಪಂದ್ಯ ಸೋತಿರುವ ಲಂಕಾ 6 ಅಂಕದೊಂದಿಗೆ 2ನೇ ಸ್ಥಾನ ಪಡೆದಿದೆ.
