ಉದಯವಾಹಿನಿ, ಕೋಟಾ (ರಾಜಸ್ಥಾನ): ಇತ್ತೀಚಿಗಷ್ಟೆ ಜೆಇಇ ಮೇನ್ಸ್- 2026 ಫಲಿತಾಂಶ ಹೊರಬಿದ್ದಿದೆ. ವಿಶೇಷ ಎಂದರೆ ಈ ಪರೀಕ್ಷೆಯಲ್ಲಿ 12 ವಿದ್ಯಾರ್ಥಿಗಳು ಶೇ100ರಷ್ಟು ಅಂಕಗಳನ್ನು ಗಳಿಸಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ 43 ವಿದ್ಯಾರ್ಥಿಗಳನ್ನು ರಾಜ್ಯ ಟಾಪರ್‌ಗಳೆಂದು ಘೋಷಿಸಿದ್ದರೂ, ದೇಶದ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇವಲ 12 ಅಭ್ಯರ್ಥಿಗಳು ಮಾತ್ರ ಶೇ 100 ಅಂಕಗಳನ್ನು ಗಳಿಸಿದ್ದಾರೆ ಎಂದು ಶಿಕ್ಷಣ ತಜ್ಞ ದೇವ್ ಶರ್ಮಾ ಹೇಳಿದ್ದಾರೆ.
43 ಟಾಪರ್‌ಗಳು ಕೇವಲ 8 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದಿಂದ ಬಂದವರಾಗಿದ್ದಾರೆ. ಉಳಿದ 20 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳಿಂದ ಒಬ್ಬ ವಿದ್ಯಾರ್ಥಿಯೂ ಶೇ 100ರಷ್ಟು ಫಲಿತಾಂಶಗಳಿಸಿದ ಕ್ಲಬ್‌ಗೆ ಸೇರಿಲ್ಲ. ಅನೇಕ ರಾಜ್ಯಗಳಲ್ಲಿ ರಾಜ್ಯ ಟಾಪರ್‌ಗಳು 99 ಶೇಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಈ ಕುರಿತು ಹೆಚ್ಚಿನ ವಿವರಣೆ ನೀಡಿದ ದೇವ್ ಶರ್ಮಾ, ಕಳೆದ ಮೂರು ವರ್ಷದಿಂದ 11 ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಶೇ 100ರಷ್ಟು ಅಂಕಗಳನ್ನು ಗಳಿಸುತ್ತಿದ್ದರು. ಅದರಲ್ಲಿ ತೆಲಂಗಾಣ, ಆಂಧ್ರಪ್ರದೇಶ, ದೆಹಲಿ, ಬಿಹಾರ, ಗುಜರಾತ್, ಮಹಾರಾಷ್ಟ್ರ, ಹರಿಯಾಣ, ತಮಿಳುನಾಡು, ಕರ್ನಾಟಕ ಮತ್ತು ಒಡಿಶಾ ಸೇರಿತ್ತು. ಈ ವರ್ಷ 2026 ರಲ್ಲಿ 27 ರಾಜ್ಯಗಳ ವಿದ್ಯಾರ್ಥಿಗಳು ಈ ಶೇ 100ರ ಅಂಕದ ಕ್ಲಬ್‌ಗೆ ಪ್ರವೇಶಿಸಲು ವಿಫಲರಾಗಿದ್ದಾರೆ.
2025ರಲ್ಲೂ ಕೂಡ 14 ವಿದ್ಯಾರ್ಥಿಗಳು ಶೇ 100ರಷ್ಟು ಅಂಕಗಳಿಸಿದ್ದರೂ ಅವರು ಕೇವಲ 8 ರಾಜ್ಯಗಳಿಗೆ ಸೇರಿದ್ದವರಾಗಿದ್ದಾರೆ. 2024ರಲ್ಲಿ 23 ವಿದ್ಯಾರ್ಥಿಗಳು ಶೇ 100ರ ಕ್ಲಬ್ ಸೇರಿದ್ದು, ಇದರಲ್ಲೂ ಇವರೆಲ್ಲ ಕೇವಲ 9 ರಾಜ್ಯದರಾಗಿದ್ದು, ಇನ್ನುಳಿದ ರಾಜ್ಯಗಳಲ್ಲಿ ಈ ಸಾಧನೆ ಕಂಡು ಬಂದಿರಲಿಲ್ಲ. 7 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಶೇ 99ಕ್ಕಿಂತ ಕಡಿಮೆ ಅಂಕ: ಅರುಣಾಚಲ ಪ್ರದೆಶ, ಅಸ್ಸಾಂ, ಛತ್ತೀಸ್ಗಢ, ಗೋವಾ, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಣಿಪು, ಮೇಘಾಲಯ, ಮಿಜೋರಾಂ, ನಾಗಲ್ಯಾಂಡ್, ಪಂಜಾಬ್, ಸಿಕ್ಕಿಂ, ತಮಿಳುನಾಡು, ತ್ರಿಪುರಾ, ಉತ್ತರಾಖಂಡ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯು, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಲಕ್ಷದ್ವೀಪ ಮತ್ತು ಪಾಂಡಿಚೇರಿಗಳಲ್ಲಿ ಒಬ್ಬ ವಿದ್ಯಾರ್ಥಿಗಳು ಕೂಡ ಶೇ 100ರಷ್ಟು ಅಂಕ ಗಳಿಸಲು ಸಾಧ್ಯವಾಗಿಲ್ಲ. ಅಲ್ಲದೇ, 7 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಶೆ 99ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿದ್ದಾರೆ. ಇವುಗಳಲ್ಲಿ ಲಕ್ಷದ್ವೀಪ, ಮಿಜೋರಾಂ, ನಾಗಾಲ್ಯಾಂಡ್, ಲಡಾಖ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಮಣಿಪುರ ಮತ್ತು ಮೇಘಾಲಯ ಸೇರಿವೆ.
