ಉದಯವಾಹಿನಿ, ಬೆಂಗಳೂರು: AI ಶೃಂಗಸಭೆಯಲ್ಲಿ ಯೂತ್ ಕಾಂಗ್ರೆಸ್ ಪ್ರತಿಭಟನೆ ಮಾಡಿದ್ರೆ ಅದಕ್ಕೆ ರಾಹುಲ್ ಗಾಂಧಿ ಹೇಗೆ ಹೊಣೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಲ ಯುವಕರು ಹೇಳದೆ ಕೇಳದೇ ಏನೋ‌ ಮಾಡಿರಬಹುದು ಅದಕ್ಕೆ ರಾಹುಲ್ ಗಾಂಧಿಯವರೇ ಹೇಳಿದ್ದಾರೆ ಅಂತ ಇದಿಯಾ? ಎಂದಿದ್ದಾರೆ.

ನಮ್ಮ ಕಾಮನ್ ವೆಲ್ತ್ ಗೇಮ್ಸ್ ನಡೆದಾಗ 56 ದೇಶಗಳು ಬಂದಿದ್ವು ಆಗ ಇದೇ ಬಿಜೆಪಿ ಅವರು ಪ್ರತಿಭಟನೆ ಮಾಡಿರುವ ಇತಿಹಾಸ ಇದೆ. ಆಗ ದೇಶದ ಮರ್ಯಾದೆ ಏನಾಗಿಲ್ವ? ಟ್ರಂಪ್ ಅವರು ದಿನ ಬೆಳಗ್ಗೆ ಎದ್ದು ನಾನೇ ಯುದ್ದ ನಿಲ್ಲಿಸಿದ್ದೇನೆ ನನ್ನಿಂದಲೇ ಎಲ್ಲ ನಡೆಯುತ್ತಿದೆ. ನಾನು ಮೋದಿ ಅವರ ಭವಿಷ್ಯವನ್ನ ನಿರ್ನಾಮ ಮಾಡಬಹುದು ಅಂದಾಗ ದೇಶದ ಮರ್ಯಾದೆ ಹಾಳಾಗಲ್ವ? ನಾವು ಹೇಳುವುದು ಬಿಡಿ, ವಿದೇಶದಿಂದ ಬಂದಂತ ತಜ್ಞರು ಅವರು ಈ ಸಮ್ಮಿಟ್ ಬಗ್ಗೆ ಏನ್ ಹೇಳಿದ್ದಾರೆ? ಆಗ ದೇಶದ ಮರ್ಯಾದೆ ಹೋಗಿಲ್ವ.? AI ಸಮ್ಮಿಟ್ ಸರಿಯಾಗಿ ನಡೆಸಿಕೊಂಡು ಹೋಗಿದ್ರೆ ಪ್ರತಿಭಟನೆ ಅವಶ್ಯಕತೆ ಇರಲಿಲ್ಲ. ಚೀನಾಗೆ ಭೂಮಿ ಕೊಟ್ಟಾಗ ದೇಶದ ಮರ್ಯಾದೆ ಹಾಳಾಗಿಲ್ವ? ಆಪರೇಷನ್ ಸಿಂಧೂರ ಬಗ್ಗೆ ಅಮೆರಿಕದವರು ಹೇಳಿದಾಗ ಮರ್ಯಾದೆ ಹೋಗಿಲ್ವ ಶೇ.50 ರಷ್ಟು ತೆರಿಗೆ ಹಾಕಿದಾಗ ಮರ್ಯಾದೆ ಹೋಗಿಲ್ವ? ಅಂತಾ ಪ್ರಶ್ನೆಗಳ ಮಳೆ ಸುರಿಸಿದ್ರು.

Leave a Reply

Your email address will not be published. Required fields are marked *

error: Content is protected !!