ಉದಯವಾಹಿನಿ, ಮುಂದಿನ ಐದು ವರ್ಷಗಳಲ್ಲಿ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಯಿಂದ ಮಾತ್ರವಲ್ಲದೆ ದೇಶದಿಂದ ಹೊರಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಖಡಕ್ ಸಂದೇಶ ನೀಡಿದ್ದಾರೆ.
ಅಸ್ಸಾಂ ಪೊಲೀಸ್ 10ನೇ ಬೆಟಾಲಿಯನ್‌ನ ಹೊಸ ಕ್ಯಾಂಪಸ್‌ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅಮಿತ್ ಶಾ,ಇಂದು ಈ ಕ್ಯಾಂಪಸ್ ಒಳನುಸುಳುಕೋರರಿಂದ ಅತಿಕ್ರಮಣದಿಂದ ಮುಕ್ತವಾದ ಭೂಮಿಯಲ್ಲಿ ನಿರ್ಮಿಸಲಾಗುತ್ತಿದೆ. ಆದರೆ, ನುಸುಳುಕೋರರನ್ನು ಅತಿಕ್ರಮಣ ಭೂಮಿಯಿಂದ ಹೊರಹಾಕಿದರೆ ಬೇರೆಡೆಗೆ ಹೋಗಿ ನೆಲೆಸುತ್ತಾರೆ. ಹಾಗಾಗಿ ಅವರನ್ನು ದೇಶದಿಂದ ತೆಗೆದುಹಾಕಬೇಕು ಎಂದರು.
ಈ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಶಾ, ಈ ಹಿಂದೆ ಕಾಂಗ್ರೆಸ್ ನಾಯಕರು ಒಳನುಸುಳುಕೋರರನ್ನು ದೇಶದಿಂದ ಹೊರಹಾಕುವುದಾಗಿ ಹೇಳಿದ್ದರು. ಆದರೆ ಅವರು ಮತಬ್ಯಾಂಕ್ ಗಾಗಿ ಅಕ್ರಮ ವಲಸಿಗರನ್ನು ಹೊರ ಹಾಕಲು ಮುಂದಾಗಿಲ್ಲ. ನುಸುಳುಕೋರರನ್ನು ರಕ್ಷಿಸುವ ಕಾಂಗ್ರೆಸ್ ನೀತಿಯು ಅಸ್ಸಾಂನ ‘ಜಾತಿ’ (ಜನರು), ‘ಮತಿ’ (ಭೂಮಿ) ಮತ್ತು ಭೀತಿ (ಭದ್ರತೆಗೆ) ಬೆದರಿಕೆ ಹಾಕಿದೆ ಎಂದು ಹೇಳಿದರು. ಇದೇ ವೇಳೆ ರಾಹುಲ್ ಗಾಂಧಿಗೆ ಸವಾಲು ಹಾಕಿದ ಅಮಿತ್ ಶಾ,ಕಾಂಗ್ರೆಸ್ ನುಸುಳುಕೋರರನ್ನು ಹೊರಹಾಕಲು ಬದ್ಧವಾಗಿದ್ದರೆ ತನ್ನ ಪ್ರಣಾಳಿಕೆಯಲ್ಲಿ ನಮೂದಿಸಲಿ ಎಂದು ಗುಡುಗಿದರು.

Leave a Reply

Your email address will not be published. Required fields are marked *

error: Content is protected !!