ಉದಯವಾಹಿನಿ, ಬೆಂಗಳೂರು: ಮೊದಲ ಬಾರಿ ಗೆದ್ದ ಶಾಸಕರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ. ಆದರೆ ಸಚಿವ ಸ್ಥಾನ ಕೊಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ತಿಳಿಸಿದ್ದಾರೆ.
ಮೊದಲ ಬಾರಿ ಗೆದ್ದ ಕಾಂಗ್ರೆಸ್ (ಶಾಸಕರು ಮಂತ್ರಿ ಸ್ಥಾನಕ್ಕಾಗಿ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೊದಲ ಬಾರಿ ಗೆದ್ದಿರೋರು ಮಂತ್ರಿ ಸ್ಥಾನ ಕೇಳೋದು ತಪ್ಪೇನು ಅಲ್ಲ. ಇದರಲ್ಲಿ ಯಾವುದೇ ಗೊಂದಲ, ಬಂಡಾಯ ಇಲ್ಲ. ಎಲ್ಲರಿಗೂ ಮಂತ್ರಿ ಆಗೋಕೆ ಆಸೆ ಇದ್ದೇ ಇರುತ್ತದೆ ಎಂದರು.
ನಮ್ಮಲ್ಲಿ 135 ಜನ ಗೆದ್ದಿದ್ದೇವೆ. ನಮ್ಮಲ್ಲಿ ಮೊದಲಿಂದ ಸೀನಿಯರ್‌ಗಳಿಗೆ ಮಂತ್ರಿ ಸ್ಥಾನ ಕೊಡಬೇಕು ಅಂತ ಪದ್ಧತಿ ಇದೆ. ಈ ಬಾರಿ ಗೆದ್ದಿರೋರು ಕೇಳೋದು ತಪ್ಪಲ್ಲ. ಬುದ್ಧಿವಂತ, ಸಮರ್ಥರು ಇದ್ದಾರೆ. ಅವರು ಕೇಳೋದು ತಪ್ಪಲ್ಲ. ಹೈಕಮಾಂಡ್ ಏನು ನಿರ್ಧಾರ ಮಾಡುತ್ತೋ ಮಾಡಲಿ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷ ಬೇರೆಯವರಿಗೆ ಕೊಡಿ ಅಂತ ಸತೀಶ್ ಜಾರಕಿಹೊಳಿಯಿಂದ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳೋದು ತಪ್ಪಲ್ಲ. ಅವರಿಗೆ ಅಹಿಂದ ಮುನ್ನಡೆಸುವ ಕೆಪಾಸಿಟಿ ಇದೆ, ಖರ್ಗೆ-ಸತೀಶ್ ಜಾರಕಿಹೊಳಿ ಮಾತಾಡಿರೋದು ನಮಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ನೋಡಿದ್ದೇನೆ. ಸಿಎಂಗೂ ಕ್ಲೈಮ್ ಮಾಡ್ತಾರೆ, ಅಧ್ಯಕ್ಷರಿಗೂ ಕ್ಲೈಮ್ ಮಾಡ್ತಾರೆ. ಕ್ಲೈಮ್ ಮಾಡೋರು ಇದ್ದಾರೆ. ಅದರ ಬಗ್ಗೆ ನಮಗೇನು ಗೊತ್ತಿಲ್ಲ. ಅಧ್ಯಕ್ಷರನ್ನಾಗಿ ಮಾಡಿ ಅಂತ ಜಾರಕಿಹೋಳಿ ಖರ್ಗೆ ಕೇಳಿರೋದು ನನಗೆ ಗೊತ್ತಿಲ್ಲ. ಅವರು ಒನ್ ಟು ಒನ್ ಮಾತಾಡಿದ್ದಾರೆ ನಮಗೇನು ಗೊತ್ತಿಲ್ಲ. ಸತೀಶ್ ಜಾರಕಿಹೋಳಿ ನಾನು ಭೇಟಿಯಾಗಿಲ್ಲ. ಹೀಗಾಗಿ ಗೊತ್ತಿಲ್ಲ ಎಂದರು.
