ಉದಯವಾಹಿನಿ, ಬೆಂಗಳೂರು: ದೈವಕ್ಕೆ ಅವಮಾನದ ಆರೋಪ ಹೊತ್ತಿರುವ ರಣವೀರ್ ಸಿಂಗ್‌ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ , ರಣವೀರ್ ಸಿಂಗ್ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಪೊಲೀಸರಿಗೆ ಸೂಚನೆ ನೀಡಿದೆ. ಇದೇ ವೇಳೆ ರಣವೀರ್ ಸಿಂಗ್‌ರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ರಣವೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಮಂಗಳವಾರ ವಿಚಾರಣೆ ನಡೆಸಿತು. ಒಂದು ಭಾಗದ ಜನರ ಮತ್ತು ಧಾರ್ಮಿಕ ಭಾವನೆಗೆ ದಕ್ಕೆ ತರುವ ಹಾಗೆ ಮಾತಬಾಡಬಾರದು. ಅದು ರಣವೀರ್ ಸಿಂಗ್ ಅಗಿರಲಿ, ಯಾರೇ ಅಗಿದ್ದು ಸರಿ ಹಾಗೆ ಮಾತನಾಡುವುದು ಸಲ್ಲದು. ಸೂಪರ್ ಸ್ಟಾರ್ ಅಗಿರುವ ರಣವೀರ್ ಸಿಂಗ್ ಗೆ ಸಾಕಷ್ಟು ಜನ ಫಾಲೋ ಮಾಡುವವರು ಇದ್ದಾರೆ. ಹೀಗಾಗಿ ಇದನ್ನ ಹಗುರವಾಗಿ ಪರಿಗಣಿಸಲಾಗುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಗೋವಾದಲ್ಲಿ ಸಿನಿಮಾ ಫೆಸ್ಟಿವಲ್ ವೇಳೆ ಕಾಂತಾರ ಸಿನಿಮಾ ಕುರಿತು ಅಪಹಾಸ್ಯ ಮಾಡಿದ್ದಾರೆ ಎಂಬ ಆರೋಪವಿತ್ತು. ನಟ ರಿಷಬ್ ಶೆಟ್ಟಿ ಅವರನ್ನು ಹೊಗಳುವ ಭರದಲ್ಲಿ ದೈವವನ್ನು ಫೀಮೇಲ್ ಗೋಸ್ಟ್ ಎಂದು ಹೇಳಿಕೆ ನೀಡಿದ್ದ ರಣವೀರ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾ.ನಾಗಪ್ರಸನ್ನ ಪೀಠ ರಣವೀರ್ ಸಿಂಗ್‌ರನ್ನ ತರಾಟಗೆ ತೆಗೆದುಕೊಂಡಿದೆ.
ರಣವೀರ್ ಸಿಂಗ್ ಪರವಾಗಿ ಸಜನ್ ಪೂವಯ್ಯ ಕೋರ್ಟ್ ಗೆ ಹಾಜರ್ ಆಗಿ ವಾದ ಮಂಡಿಸಿದ್ರು. ರಿಷಬ್ ಶೆಟ್ಟಿ ಅಭಿನಯನದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಮಾತನಾಡಿದ ಪದಗಳಿಗು ಕೂಡ ಕ್ಷಮೆ ಕೋರಲಾಗಿದೆ. ಉದ್ದೇಶ ಪೂರ್ವಕವಾಗಿ ಹೇಳಿಕೆ ನೀಡಿಲ್ಲ. ಅಲ್ಲದೆ ತನಿಖೆಗೆ ಕೂಡ ಸಹಕಾರ ನೀಡುವುದಾಗಿ ಕೋರ್ಟ್‌ಗೆ ಮಾಹಿತಿ ನೀಡಿದ್ರು. ಇದೇ ವೇಳೆ ದೂರುದಾರರ ಪರ ವಕೀಲರು ರಣವೀರ್ ಪತ್ನಿ ದೀಪಿಕಾ ಕೂಡ ಕನ್ನಡದವರು ಆಗಿದ್ದಾರೆ. ಕನ್ನಡ ಬಗ್ಗೆ ತಿಳಿದುಕೊಂಡು ಮಾತನಾಡಬೇಕು ಎಂದು ವಾದ ಮಂಡಿಸಿದರು.ವಾದ ಪ್ರತಿವಾದ ಆಲಿಸಿದ ಕೋರ್ಟ್ ಮುಂದಿನ ಆದೇಶದವರೆಗೆ ಯಾವುದೇ ಬಲವಂತದ ಕ್ರಮ ಜರುಗಿಸಿದಂತೆ ಆದೇಶ ಮಾಡಿ ಮುಂದಿನ ಸೋಮವಾರಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿದೆ.
