ಉದಯವಾಹಿನಿ, ನವದೆಹಲಿ: ಹಸಿಯಾಗಿ ತಿನ್ನಬಹುದಾದ ತರಕಾರಿಗಳು ರುಚಿಕರವಾಗಿದ್ದು ಅಂತಹ ತರಕಾರಿಗಳಲ್ಲಿ ಕ್ಯಾರೆಟ್  ಕೂಡ ಒಂದಾಗಿದೆ. ಜನರು ಹೆಚ್ಚು ಇಷ್ಟ ಪಟ್ಟು ತಿನ್ನುವ ತರಕಾರಿ ಇದಾಗಿದ್ದು ವಿಟಮಿನ್ ಎ, ಬೀಟಾ-ಕ್ಯಾರೋಟಿನ್ ಮತ್ತು ನಾರಿನಂಶ ಹೆಚ್ಚಾಗಿರುತ್ತದೆ‌‌. ಸಾಮಾನ್ಯವಾಗಿ ನಾವು ಖರೀದಿ ಮಾಡಲು ಹೋದಾಗ ಕಿತ್ತಳೆ ಬಣ್ಣದ ಕ್ಯಾರೆಟ್‌ ಮತ್ತು ಕೆಂಪು ಕ್ಯಾರೆಟ್‌ಗಳು ಹೆಚ್ಚು ಲಭ್ಯವಿರುತ್ತವೆ. ಇವೆರಡರಲ್ಲಿ ಯಾವುದು ಹೆಚ್ಚು ದೇಹಕ್ಕೆ ಉಪಯುಕ್ತ ಎನ್ನುವ ಪ್ರಶ್ನೆ ನಿಮ್ಮಲ್ಲಿ ಬರಬಹುದು.‌

ತಾಜಾ ಕ್ಯಾರೆಟ್‌ಗಳು ಅಡುಗೆ ಮನೆಗಳಲ್ಲಿ ಪ್ರಧಾನವಾಗಿವೆ. ಇದರಲ್ಲಿ ವಿಟಮಿನ್ ಎ ಮತ್ತು ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದ್ದು, ಲುಟೀನ್, ಜಿಯಾಕ್ಸಾಂಥಿನ್, ವಿಟಮಿನ್ ಕೆ, ಡಯೆಟರಿ ಫೈಬರ್ ಇತ್ಯಾದಿಗಳು ಹೆಚ್ಚಾಗಿವೆ. ಇದರ ಜೊತೆ ತಿನ್ನಲು ಕೂಡ ರುಚಿ ಇರುವುದರಿಂದ ಅವುಗಳನ್ನು ಸಲಾಡ್‌ ಮೂಲಕ, ಸ್ಪೂಥಿ ಅಥವಾ ಜ್ಯೂಸ್ ಮಾಡಿ ಕುಡಿಯುತ್ತೇವೆ‌ ಆದರೆ ಕೆಂಪು ಕ್ಯಾರೆಟ್‌ಗಳು ಕಿತ್ತಳೆ ಬಣ್ಣದ ಕ್ಯಾರೆಟ್‌ಗಿಂತ ಆರೋಗ್ಯಕರವೇ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

ಕ್ಯಾರೆಟ್‌ಗಳ ಬಣ್ಣವು ಅದರಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳ ಮೇಲೆ ಅವಲಂಬಿತವಾಗಿರುತ್ತದೆ. ಕಿತ್ತಳೆ ಕ್ಯಾರೆಟ್‌ನಲ್ಲಿ ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದ್ದರೆ ‌ಕೆಂಪು ಕ್ಯಾರೆಟ್‌ನಲ್ಲಿ ಲೈಕೋ ಪೀನ್ ಎಂಬ ಅಂಶ ಹೆಚ್ಚಾಗಿರುತ್ತದೆ. ಎರಡು ಬಣ್ಣದ ಕ್ಯಾರೆಟ್ ಗಳು ದೇಹದ ಆರೋಗ್ಯಕ್ಕೆ ಉತ್ತಮವಾಗಿದೆ.
ಕಿತ್ತಳೆ ಕ್ಯಾರೆಟ್‌ಗಳು ಕಣ್ಣಿನ ಆರೋಗ್ಯವನ್ನು ಬೆಂಬಲಿಸಲಿದ್ದು ಇವು ವಿಟಮಿನ್ ಎ ಕೊರತೆಯಿಂದ ರಕ್ಷಿಸಲು ಸಹಾಯ ಮಾಡು ತ್ತದೆ. ಅದೇ ರೀತಿ ಫೈಬರ್‌ನ ಉತ್ತಮ ಮೂಲವಾಗಿದ್ದು ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಕಿತ್ತಳೆ ಬಣ್ಣದ ಕ್ಯಾರೆಟ್‌ ಇರುಳುಗಣ್ಣು ಕಾಯಿಲೆ ತಡೆಯಲು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಅತ್ಯುತ್ತಮ.
ಇದು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವ ಜತೆಗೆ ಹಾನಿಕಾರಕ ಬ್ಯಾಕ್ಟೀರಿಯಾ, ವೈರಸ್ ಮತ್ತು ಉರಿಯೂತದಿಂದ ಕಾಪಾಡಲು ಸಹಾಯ ಮಾಡುತ್ತದೆ.
ಕೆಂಪು ಕ್ಯಾರೆಟ್:
ಕೆಂಪು ಕ್ಯಾರೆಟ್‌ನಲ್ಲಿರುವ ‘ಲೈಕೋಪೀನ್’ ಹೃದಯದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಕಿತ್ತಳೆ ಕ್ಯಾರೆಟ್ ಚರ್ಮಕ್ಕೆ ಹೊಳಪನ್ನು ನೀಡಿದರೆ, ಕೆಂಪು ಕ್ಯಾರೆಟ್ ಸೂರ್ಯನ ಕಿರಣಗಳಿಂದ ಉಂಟಾಗುವ ಹಾನಿಯಿಂದ ರಕ್ಷಣೆ ಮಾಡುತ್ತದೆ.

ಅದೇ ರೀತಿ ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸಲು ಇದು ಸಹಕಾರಿಯಾಗಿದೆ.ಆದರೆ ಕ್ಯಾರೆಟ್ ಅನ್ನು ಹಸಿಯಾಗಿ ತಿನ್ನುವುದಕ್ಕಿಂತ ಲಘುವಾಗಿ ಹಬೆಯಲ್ಲಿ ಬೇಯಿಸಿ ತಿಂದರೆ ಆರೋಗ್ಯಕ್ಕೆ ಉತ್ತಮ

Leave a Reply

Your email address will not be published. Required fields are marked *

error: Content is protected !!