ಉದಯವಾಹಿನಿ, ಅಂಕಾರ:‌ ಟರ್ಕಿ ವಾಯುಪಡೆಗೆ ಸೇರಿದ, ಅಮೆರಿಕ ನಿರ್ಮಿತ F-16 ಯುದ್ಧವಿಮಾನ ಪತನಗೊಂಡು ಓರ್ವ ಪೈಲಟ್‌ ಸಾವನ್ನಪ್ಪಿರುವ ಘಟನೆ ಟರ್ಕಿಯ ಬಲಿಕೇಸಿರ್‌ ನಗರದಲ್ಲಿ ನಡೆದಿದೆ. ಈ ತಡವಾಗಿ ಬೆಳಕಿಗೆ ಬಂದಿದೆ.ಬಲಿಕೇಸಿರ್‌ ನಗರದ ಬುರ್ಸಾ-ಇಜ್ಮಿರ್ ಹೆದ್ದಾರಿಯ ಬಳಿ ಘಟನೆ ಸಂಭವಿಸಿದೆ. ದುರಂತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಆಂಬುಲೆನ್ಸ್‌ಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿವೆ.ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವಿಮಾನದ ಅವಶೇಷಗಳು ರಸ್ತೆಯಲ್ಲಿ ಚದುರಿಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಘಟನೆ ಬಳಿಕ ಟರ್ಕೀಶ್‌ ಗವರ್ನರ್ ಇಸ್ಮಾಯಿಲ್ ಉಸ್ತಾವೋಗ್ಲು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಬಲಿಕೇಸಿರ್‌ 9ನೇ ಮುಖ್ಯ ಜೆಟ್ ಬೇಸ್ ಕಮಾಂಡ್‌ನ ಸ್ಕ್ವಾಡ್ರನ್‌ಗೆ ಸೇರಿದ್ದ ನಮ್ಮ F-16 ವಿಮಾನ ಫೆ.23 ರಂದು ಪತನಗೊಂಡಿದೆ. ಅಂದು ನಸುಕಿನ 12:50 ರ ಸುಮಾರಿಗೆ ಮಿಷನ್ ಹಾರಾಟದ ಸಮಯದಲ್ಲಿ ಅಪಘಾತಕ್ಕೀಡಾಗಿದೆ. ಈ ವೇಳೆ ನಮ್ಮ ಓರ್ವ ಪೈಲಟ್‌ ಕೂಡ ಹುತಾತ್ಮರಾಗಿದ್ದಾರೆ. ನಮ್ಮ ಹುತಾತ್ಮರ ಮೇಲೆ ಕರುಣೆ ತೋರಲು ನಾನು ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇನೆ ಎನ್ನುತ್ತಾ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!