ಉದಯವಾಹಿನಿ,: ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ ಕ್ರಮವನ್ನು ಸುಧಾರಿಸುವುದು ಅತ್ಯಗತ್ಯ. ಪ್ರತಿದಿನ ಸೇವಿಸುವ ಆಹಾರ, ಕುಡಿಯುವ ಪಾನೀಯ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಪ್ರತಿಯೊಬ್ಬರೂ ಅಗತ್ಯ ಪೋಷಕಾಂಶಗಳ ದೈನಂದಿನ ಅಗತ್ಯಗಳನ್ನು ಸುಲಭವಾಗಿ ಪೂರೈಸುವಂತಹ ಆಹಾರವನ್ನು ಸೇವಿಸಬೇಕಾಗುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಉತ್ತಮ ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು, ಜೀವಸತ್ವಗಳು ಹಾಗೂ ಪ್ರೋಟೀನ್ ಮಾತ್ರವಲ್ಲದೆ ನಾರಿನಂಶದಿಂದ ಹೇರಳವಾಗಿರುವ ಆಹಾರವನ್ನು ನಿಯಮಿತವಾಗಿ ಸೇವಿಸುವುದು ನಿರ್ಣಾಯಕವಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ನಿಮ್ಮ ಡಯಟ್​ನಲ್ಲಿ ನಾರಿನಂಶದ ಆಹಾರಗಳಿವೆಯೇ?: ವಿಶ್ವ ಆರೋಗ್ಯ ಸಂಸ್ಥೆ ತಿಳಿಸುವ ಪ್ರಕಾರ, ಆರೋಗ್ಯವಂತ ವಯಸ್ಕರು ಪ್ರತಿದಿನ ಕನಿಷ್ಠ 25 ಗ್ರಾಂ ನಾರಿನಂಶವನ್ನು ಸೇವಿಸಬೇಕು, ಆದರೆ, ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಹೆಚ್ಚಿನ ಜನರು ಇದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತಿದ್ದಾರೆ. ಆಹಾರದಲ್ಲಿ ನಾರಿನ ಕೊರತೆಯು ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹೆಚ್ಚಿನ ಭಾರತೀಯರಲ್ಲಿ ನಾರಿನ ಕೊರತೆಯ ಅಪಾಯವು ಹಲವು ತೊಡಕುಗಳಿಗೆ ಕಾರಣವಾಗುತ್ತದೆ.

ತಜ್ಞರು ತಿಳಿಸುವುದೇನು?: ಗ್ಯಾಸ್ಟ್ರೋಎಂಟರಾಲಜಿ ಹಾಗೂ ಹೆಪಟಾಲಜಿಯ ಸಂಶೋಧಕರು ತಿಳಿಸುವ ಪ್ರಕಾರ, ಸುಮಾರು ಶೇಕಡಾ 70ರಷ್ಟು ಭಾರತೀಯರು ಅಥವಾ 10 ರಲ್ಲಿ 7 ಜನರು ತಮ್ಮ ದೈನಂದಿನ ನಾರಿನ ಅಂಶದ ಆಹಾರವನ್ನು ಸೇವಿಸುತ್ತಿಲ್ಲ. ಇದು ಮಲಬದ್ಧತೆ, ಉಬ್ಬುವುದು, ಫ್ಯಾಟಿ ಲಿವರ್, ಮಧುಮೇಹ ಹಾಗೂ ವಿವಿಧ ಚಯಾಪಚಯ ಕಾಯಿಲೆಗಳಿಂದ ಬಳಲಬೇಕಾಗುತ್ತದೆ. ನಾರಿನ ಅಂಶವು ನಮ್ಮ ಆರೋಗ್ಯಕ್ಕೆ ಅನಿವಾರ್ಯವಲ್ಲ. ಕರಗುವ ನಾರಿನ ಅಂಶವು ರಕ್ತದಲ್ಲಿನ ಸಕ್ಕರೆ ಹಾಗೂ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕರಗದ ನಾರು ಕರುಳಿನ ಚಲನೆ ಮತ್ತು ಕರುಳಿನ ಚಲನಶೀಲತೆಯನ್ನು ಸುಧಾರಿಸುತ್ತದೆ. ಈ ಎರಡು ರೀತಿಯ ನಾರು ಕರುಳಿನ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ. ಉತ್ತಮ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಮತ್ತು ಅನೇಕ ರೋಗಗಳನ್ನು ತಡೆಗಟ್ಟಲು ತುಂಬಾ ಅವಶ್ಯವಾಗಿದೆ.

ತಪ್ಪಾದ ಆಹಾರ ಕ್ರಮಗಳು, ಜಂಕ್ ಫುಡ್​ ಹಾಗೂ ಸಂಸ್ಕರಿಸಿದ ಆಹಾರಗಳ ಹೆಚ್ಚುತ್ತಿರುವ ಸೇವನೆಯು ನಾರಿನ ಕೊರತೆಗೆ ಕಾರಣವಾಗುತ್ತಿದೆ. ಸಾಕಷ್ಟು ನಾರಿನ ಅಂಗಳಿರುವ ಆಹಾರ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಹಾಗೂ ಸಮತೋಲಿತ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಾರಿನ ಅಂಶದ ಕೊರತೆಯು ವಿವಿಧ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ತಿಳಿಸುತ್ತಾರೆ.

 

Leave a Reply

Your email address will not be published. Required fields are marked *

error: Content is protected !!