ಉದಯವಾಹಿನಿ,: ಸಿಹಿ ತಿಂಡಿಗಳಲ್ಲಿ ಒಂದಾದ ಜಿಲೇಬಿ ಎಂದರೆ ಎಲ್ಲರಿಗೂ ಪ್ರೀತಿ. ಸಾಮಾನ್ಯವಾಗಿ ಮೈದಾ ಹಿಟ್ಟಿನಿಂದ ಮಾಡುವ ಈ ಸ್ವೀಟ್, ಬಿಸಿಬಿಸಿ ಪಾಕದಲ್ಲಿ ನೆನೆದು ತಿನ್ನುವಾಗ ಬಾಯಲ್ಲಿ ಕರಗುವಂತೆ ಮಾಡುತ್ತದೆ. ಆದರೆ ಮೈದಾ ಸೇವಿಸಲು ಇಷ್ಟಪಡದವರು ಅಥವಾ ಉಪವಾಸದ ಸಮಯದಲ್ಲಿ ಸಿಹಿ ಬಯಸುವವರಿಗೆ ಒಂದು ಹೊಸ ಆಯ್ಕೆ ಇದೆ. ಅದೇ ಆಲೂಗಡ್ಡೆ ಜಿಲೇಬಿ. ಹೌದು, ಆಲೂಗಡ್ಡೆಯನ್ನು ಬಳಸಿ ಮಾಡುವ ಈ ಜಿಲೇಬಿ ಸಾಂಪ್ರದಾಯಿಕದ್ದಕ್ಕಿಂತ ಹೆಚ್ಚು ಗರಿಗರಿ, ಮೃದು ಮತ್ತು ರಸಭರಿತವಾಗಿರುತ್ತದೆ.
ಮೈದಾ ರಹಿತವಾಗಿರುವುದರಿಂದ ಆರೋಗ್ಯಕರವೂ ಹೌದು. ಆಲೂಗಡ್ಡೆಯ ನೈಸರ್ಗಿಕ ಪಿಷ್ಟವು ಜಿಲೇಬಿಯ ವಿನ್ಯಾಸವನ್ನು ಸುಂದರಗೊಳಿಸುತ್ತದೆ ಮತ್ತು ರುಚಿಯನ್ನು ಹೆಚ್ಚಿಸುತ್ತದೆ. ಹಬ್ಬಗಳು, ಪಾರ್ಟಿಗಳು ಅಥವಾ ಸಾಮಾನ್ಯ ದಿನಗಳಲ್ಲಿ ಮನೆಯಲ್ಲೇ ಸುಲಭವಾಗಿ ಮಾಡಬಹುದು.
ಟೇಸ್ಟ್​ನಲ್ಲಿ ಬೆಸ್ಟ್​ ಆಲೂಗಡ್ಡೆ ಜಿಲೇಬಿ!
ಆಲೂಗಡ್ಡೆ ಜಿಲೇಬಿಯೇ ಬೇರೆ ರೀತಿ. ಸಾಮಾನ್ಯ ಜಿಲೇಬಿ ಮೈದಾ, ಮಜ್ಜಿಗೆ ಅಥವಾ ಯೋಗರ್ಟ್ ಬಳಸಿ ಹುಳಿ ಹದಕ್ಕೆ ಇಟ್ಟು ಮಾಡುತ್ತಾರೆ. ಆದರೆ ಆಲೂಗಡ್ಡೆ ಜಿಲೇಬಿ ಹೊಸ ರೂಪಾಂತರ. ಇದು ಉತ್ತರ ಭಾರತದಲ್ಲಿ ಪ್ರಸಿದ್ಧವಾಗಿದ್ದು, ನವರಾತ್ರಿ ಅಥವಾ ದೀಪಾವಳಿ ಸಮಯದಲ್ಲಿ ಉಪವಾಸಕ್ಕೆ ಸೂಕ್ತ. ಆಲೂಗಡ್ಡೆಯ ಸ್ಟಾರ್ಚ್ ಜಿಲೇಬಿಯನ್ನು ಕ್ರಿಸ್ಪಿಯಾಗಿ ಮಾಡುತ್ತದೆ, ಮತ್ತು ಒಳಗಡೆ ಮೃದುವಾಗಿರುತ್ತದೆ. ಇದನ್ನು ಮಾಡುವುದು ಸುಲಭ, ಮತ್ತು ಬೇಕಾಗುವ ಸಾಮಗ್ರಿಗಳು ಮನೆಯಲ್ಲೇ ಇರುತ್ತವೆ.

ಆಲೂಗಡ್ಡೆ ಜಿಲೇಬಿಗೆ ಬೇಕಾಗುವ ಸಾಮಗ್ರಿಗಳು!
ಆಲೂಗಡ್ಡೆ (ಬೇಯಿಸಿದ್ದು): 4-5 ಮಧ್ಯಮ ಗಾತ್ರದ್ದು ಜಿಲೇಬಿ ಮಿಶ್ರಣಕ್ಕೆ
ಕಾರ್ನ್‌ಫ್ಲೋರ್- 1/2 ಕಪ್
ಮೈದಾ: 2 ಚಮಚ
ಬೇಕಿಂಗ್ ಸೋಡಾ:1/4 ಚಮಚ
ತುಪ್ಪ ಅಥವಾ ಎಣ್ಣೆ (ಮಿಶ್ರಣಕ್ಕೆ):2 ಚಮಚ
ಎಣ್ಣೆ ಅಥವಾ ತುಪ್ಪ:ಕರಿಯಲು ಬೇಕಾದಷ್ಟು
ಸಕ್ಕರೆ ಪಾಕಕ್ಕೆ ಬೇಕಾದ ಸಾಮಾಗ್ರಿ!
ಸಕ್ಕರೆ : 1 ಕಪ್
ನೀರು : 1/2 ಕಪ್
ಏಲಕ್ಕಿ ಪುಡಿ: 1/4 ಚಮಚ
ನಿಂಬೆ ರಸ: 1 ಚಮಚ
ಸ್ವಲ್ಪ ಕೇಸರಿ ದಳ: ಬಣ್ಣಕ್ಕಾಗಿ
ಈ ಸಾಮಗ್ರಿಗಳು ಸುಲಭವಾಗಿ ದೊರೆಯುತ್ತವೆ. ಆಲೂಗಡ್ಡೆಯನ್ನು ತಾಜಾ ಬೇಯಿಸಿ ಬಳಸಿ, ಹಳೆಯದು ಬಳಸಿದರೆ ರುಚಿ ಬದಲಾಗಬಹುದು.

Leave a Reply

Your email address will not be published. Required fields are marked *

error: Content is protected !!