ಉದಯವಾಹಿನಿ,: ಊಟದೊಂದಿಗೆ ಅಥವಾ ಸಂಜೆಯ ತಿಂಡಿಗೆ ಏನು ಮಾಡೋದು ಎಂದು ಯೋಚಿಸುವವರಿಗೆ ಇದೊಂದು ಸೂಪರ್ ರೆಸಿಪಿ ಇದೆ. ಕಡಲೆ ಕಾಳಿನಿಂದ ಮಾಡುವ ಕಡಲೆ ಉಸ್ಲಿ ರುಚಿಯಲ್ಲೂ ಆರೋಗ್ಯದಲ್ಲೂ ದೊಡ್ಡದಾಗಿದೆ. ಇದನ್ನು ಮಾಡಲು ಕಡಿಮೆ ಸಮಯ ಬೇಕು, ಕಡಿಮೆ ವಸ್ತುಗಳು ಬೇಕು. ಒಮ್ಮೆ ಮಾಡಿ ನೋಡಿದರೆ ಮನೆಯವರೆಲ್ಲರೂ ಪದೇ ಪದೇ ಕೇಳುತ್ತಾರೆ. ಬೆಳಗ್ಗೆ ತಿಂಡಿಗೆ, ಸಂಜೆ ಸ್ನ್ಯಾಕ್ಸ್‌ಗೆ ಅಥವಾ ಊಟದ ಜೊತೆಗೆ ಸವಿಯಲು ಇದು ಅತ್ಯುತ್ತಮ.
ಕಡಲೆ ಕಾಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಪ್ರೋಟೀನ್, ಫೈಬರ್ ಮತ್ತು ಇತರ ಪೋಷಕಾಂಶಗಳು ಹೇರಳವಾಗಿವೆ. ಇದನ್ನು ತಿನ್ನುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ, ಜೀರ್ಣಕ್ರಿಯೆ ಚೆನ್ನಾಗಿರುತ್ತದೆ. ಮಕ್ಕಳಿಗೂ ದೊಡ್ಡವರಿಗೂ ಇಷ್ಟವಾಗುವ ಈ ಉಸ್ಲಿ ರುಚಿಕರವಾಗಿರುವುದರ
ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಈ ಕಡಲೆ ಕಾಳು ಉಸ್ಲಿಯನ್ನು ಪ್ರಸಾದವಾಗಿ ನೀಡುತ್ತಾರೆ. ಅದರ ರುಚಿ ಬಹಳ ಅದ್ಭುತವಾಗಿರುತ್ತದೆ. ಇಂಥದ್ಧೇ ರುಚಿ ನಿಮಗೂ ಬೇಕಾದರೆ ನೀವು ಈ ರೀತಿ ಸಿಂಪಲ್ಲಾಗಿ ಕೆಲವೇ ನಿಮಿಷಗಳಲ್ಲಿ ಮಾಡಬಹುದು, ಇದು ಊಟದ ಜೊತೆಗೆ ಪಲ್ಯವಾಗಿಯೂ ಸಹ ಸೂಪರ್​ ಜೋಡಣೆಯಾಗುತ್ತದೆ. ಹಾಗಾದ್ರೆ ಈ ಕಡಲೆ ಉಸ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.

ಕಡಲೆ ಉಸ್ಲಿಗೆ ಬೇಕಾಗುವ ಸಾಮಗ್ರಿಗಳು!
ಕಡಲೆ ಕಾಳು – 1 ಕಪ್
ಎಣ್ಣೆ – 2 ಟೇಬಲ್ ಸ್ಪೂನ್
ಸಾಸಿವೆ – ½ ಟೀಸ್ಪೂನ್
ಜೀರಿಗೆ – ½ ಟೀಸ್ಪೂನ್
ಕರಿಬೇವು – 10-12 ಎಲೆಗಳು
ಹಸಿ ಮೆಣಸು – 2-3 (ರುಚಿಗೆ ತಕ್ಕಂತೆ)
ಶುಂಠಿ – ಒಂದು ಚೂರು (ಸಣ್ಣಗೆ ಹೆಚ್ಚಿದ್ದು)
ತೆಂಗಿನಕಾಯಿ ತುರಿ – ½ ಕಪ್
ಕೊತ್ತಂಬರಿ ಸೊಪ್ಪು – ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)
ಅರಿಶಿನ ಪುಡಿ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು

Leave a Reply

Your email address will not be published. Required fields are marked *

error: Content is protected !!