ಉದಯವಾಹಿನಿ, ನಟ ಧನ್ನೀ‌ರ್ ಗೌಡ ಅಭಿನಯದ ‘ಹಯಗ್ರೀವ’ ಸಿನಿಮಾ ಫೆಬ್ರವರಿ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಚಿತ್ರದ ಪ್ರಚಾರ ಭಾರೀ ಮಟ್ಟದಲ್ಲಿ ನಡೆದಿದ್ದು, ನಟ ದರ್ಶನ್ ಸಹ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಶುಭಾಶಯ ಕೋರಿದ್ದರು. ಆದರೆ ಬಿಡುಗಡೆ ದಿನವೇ ಚಿತ್ರಕ್ಕೆ ಅಡಚಣೆ ಎದುರಾಗಿದೆ.
ಸೆನ್ಸಾರ್ ಸಂಬಂಧಿತ ಸಮಸ್ಯೆಯ ಹಿನ್ನೆಲೆಯಲ್ಲಿ ನಿಗದಿಯಾಗಿದ್ದ ಮೊದಲ ಎರಡು ಪ್ರದರ್ಶನಗಳು ರದ್ದಾಗಿವೆ. ಈ ಬಗ್ಗೆ ಚಿತ್ರತಂಡ ಪ್ರಕಟಣೆ ನೀಡಿ, ಅನಿವಾರ್ಯ ಕಾರಣಗಳಿಂದ ಆರಂಭಿಕ ಶೋಗಳು ನಡೆಯಲಿಲ್ಲ. ಆದರೆ ಸಂಜೆ 4:30ರಿಂದ ಪ್ರದರ್ಶನ ಆರಂಭವಾಗಲಿದೆ ಎಂದು ತಿಳಿಸಿದೆ.

 

Leave a Reply

Your email address will not be published. Required fields are marked *

error: Content is protected !!