ಉದಯವಾಹಿನಿ, ಯಕೃತ್ತಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಿಂಕು ಸಿಂಗ್ ಅವರ ತಂದೆ ಖಚಂದ್ರ ಸಿಂಗ್ ನಿಧನರಾದರು. ಖಚಂದ್ರ ಸಿಂಗ್, 4 ನೇ ಹಂತದ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ತಂದೆ ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ತುರ್ತಾಗಿ ರಿಂಕು ಸಿಂಗ್‌ ವಿಶ್ವಕಪ್‌ ಟೂರ್ನಿ ಮಧ್ಯೆ ತಮ್ಮ ಮನೆಗೆ ತೆರಳಿದ್ದರು.  ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಬದಲಿ ಫೀಲ್ಡರ್‌ ಆಗಿ ಆಡಿದ್ದರು.

ಚಂದ್ರ ಅವರು ಸ್ವಲ್ಪ ಸಮಯದಿಂದ ಯಕೃತ್ತಿನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಆದರೆ ಅವರ ಆರೋಗ್ಯವು ಇತ್ತೀಚೆಗೆ ತೀವ್ರವಾಗಿ ಕ್ಷೀಣಿಸಿದ್ದರಿಂದ ಅವರನ್ನು ಗ್ರೇಟರ್ ನೋಯ್ಡಾದಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಶುಕ್ರವಾರ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಹರ್ಭಜನ್‌ ಸಂತಾಪ: ರಿಂಕು ಅವರ ತಂದೆಯ ನಿಧನಕ್ಕೆ ಟೀಮ್‌ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್‌ ಸಿಂಗ್‌ ಸಂತಾಪ ಸೂಚಿಸಿದ್ದಾರೆ. “ರಿಂಕು ಸಿಂಗ್ ಅವರ ತಂದೆ ಶ್ರೀ ಖಾನ್‌ಚಂದ್ ಸಿಂಗ್ ಜಿ ಅವರ ನಿಧನದ ಸುದ್ದಿ ಕೇಳಿ ತುಂಬಾ ನೋವಾಯಿತು. ಟಿ20 ವಿಶ್ವಕಪ್‌ನಲ್ಲಿ ತಮ್ಮ ಜವಾಬ್ದಾರಿಗಳಿಗೆ ಬದ್ಧರಾಗಿರುವ ರಿಂಕು ಮತ್ತು ಅವರ ಕುಟುಂಬಕ್ಕೆ ಇದು ವಿಶೇಷವಾಗಿ ಕಷ್ಟಕರ ಸಮಯ”

“ನನ್ನ ಹೃತ್ಪೂರ್ವಕ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರ ಮತ್ತು ಅವರ ಪ್ರೀತಿಪಾತ್ರರ ಜೊತೆ ಇವೆ. ಅಗಲಿದ ಆತ್ಮಕ್ಕೆ ಚಿರಶಾಂತಿ ನೀಡಲಿ ಮತ್ತು ದುಃಖಿತ ಕುಟುಂಬಕ್ಕೆ ಶಕ್ತಿ ಮತ್ತು ಧೈರ್ಯವನ್ನು ನೀಡಲಿ” ಎಂದು ಹರ್ಭಜನ್‌ ಟ್ವೀಟ್‌ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!