ಉದಯವಾಹಿನಿ, ಲಂಡನ್: ಈ ಬಾರಿಯ ಕಾಮನ್‍ವೆಲ್ತ್ ಯುವ ಪ್ರಶಸ್ತಿಗೆ ನಾಲ್ವರು ಭಾರತೀಯ ಯುವ ನಾಯಕರು ನಾಮಿನೇಟ್ ಆಗಿದ್ದಾರೆ. ಈ ವರ್ಷದ ಯುವ ಪ್ರಶಸ್ತಿಗಳಿಗೆ 50 ಸಾಮಾಜಿಕ ಉದ್ಯಮಿಗಳು, ಪರಿಸರ ಚಾಂಪಿಯನ್‍ಗಳು, ನಾವೀನ್ಯಕಾರರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರನ್ನು ಆಯ್ಕೆ ಮಾಡಲಾಗುತ್ತಿದೆ.ಈ ಪೈಕಿ ನಾಲ್ವರು ಭಾರತೀಯ ಯುವ ನಾಯಕರು ಶಾರ್ಟ್‍ಲಿಸ್ಟ್ ಆಗಿದ್ದಾರೆ. ಅಕ್ಷಯ್ ಮಕರ್, ಕ್ಲೈಮೇಟ್ ಆಕ್ಷನ, ಸೌಮ್ಯ ದಬ್ರಿವಾಲ್ ಲಿಂಗ ಸಮಾನತೆ, ಕೌಶಲ್ ಶೆಟ್ಟಿ 11 ಸುಸ್ಥಿರ ನಗರಗಳು ಮತ್ತು ಸಮುದಾಯಗಳು ಮತ್ತು ಶ್ರುತಿಕಾ ಸಿಲ್ಸ್ವಾಲ್ ಗುಣಮಟ್ಟದ ಶಿಕ್ಷಣದ ಅಡಿಯಲ್ಲಿ ನಾಮಿನೇಟ್ ಮಾಡಲಾಗಿದೆ.
15 ರಿಂದ 29 ವರ್ಷ ವಯಸ್ಸಿನ ಯುವಕರು, ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸ್ಪಷ್ಟವಾದ ಕೊಡುಗೆಗಳನ್ನು ನೀಡುವ ಉಪಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ವರ್ಷ, ಈ ಯುವಜನರು ನಮಗೆಲ್ಲರಿಗೂ ಉತ್ತಮವಾದ ಜಗತ್ತನ್ನು ಸೃಷ್ಟಿಸಲು ಕೈಗೊಳ್ಳುತ್ತಿರುವ ನವೀನ ಮತ್ತು ಪರಿವರ್ತನಾಶೀಲ ಕೆಲಸದಿಂದ ನಾನು ಯಾವಾಗಲೂ ಆಶ್ಚರ್ಯಚಕಿತನಾಗಿದ್ದೇನೆ ಎಂದು ಕಾಮನ್‍ವೆಲ್ತ ಪ್ರಧಾನ ಕಾರ್ಯದರ್ಶಿ ಬ್ಯಾರೊನೆಸ್ ಪೆಟ್ರಿಸಿಯಾ ಸ್ಕಾಟ್‍ಲ್ಯಾಂಡ್ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!