ಉದಯವಾಹಿನಿ, ಬೊಕಾರೊ: ಮೊಹರಂ ಮೆರವಣಿಗೆಗೆ ತಯಾರಿ ನಡೆಸುತ್ತಿದ್ದಾಗ ಹೈಟೆನ್ಷನ್ ತಂತಿ ಸ್ಪರ್ಷಿಸಿ ನಾಲ್ವರು ಸಾವನ್ನಪ್ಪಿ,ಇತರ 10 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಾರ್ಖಂಡ್‍ನ ಬೊಕಾರೊ ಜಿಲ್ಲೆಯಲ್ಲಿ ಸಂಭವಿಸಿದೆ. ರಾಂಚಿಯಿಂದ ಸುಮಾರು 80 ಕಿಮೀ ದೂರದಲ್ಲಿರುವ ಪೆಟಾರ್‍ವಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಖೆಟ್ಕೊ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.
ಕಬ್ಬಿಣದಿಂದ ಮಾಡಲ್ಪಟ್ಟಿದ್ದ, ಧಾರ್ಮಿಕ ಧ್ವಜವೂ ವಿದ್ಯುತ್ ತಂತಿಯೊಂದಿಗೆ ಸಂಪರ್ಕಕ್ಕೆ ಬಂದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಬೊಕಾರೊ ಪೊಲೀಸ್ ವರಿಷ್ಠಾಧಿಕಾರಿ ಪ್ರಿಯದರ್ಶಿ ಅಲೋಕ್ ಹೇಳಿದ್ದಾರೆ.ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಅವರು ಮುಹರಂ ಮೆರವಣಿಗೆಗೆ ತಯಾರಿ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅವರು ಧಾರ್ಮಿಕ ಧ್ವಜವನ್ನು ಹೊತ್ತಿದ್ದರು ಮತ್ತು ಅದರ ಕಂಬವನ್ನು ಕಬ್ಬಿಣದಿಂದ ಮಾಡಲಾಗಿತ್ತು. ಅದು ಹೇಗೋ 11,000
ವೋಲ್ಟ್‍ಗಳ ಹೈಟೆನ್ಶನ್ ವಿದ್ಯುತ್ ತಂತಿಯೊಂದಿಗೆ ಸಂಪರ್ಕಕ್ಕೆ ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
