ಉದಯವಾಹಿನಿ, ಶಿವಗಂಗಾ(ತಮಿಳುನಾಡು): ಮಾಸಿ ಮಾಗಂ ಹಬ್ಬದ ಪ್ರಯುಕ್ತ ಸೋಮವಾರ ನಡೆದ ಮಂಜುವಿರಟ್ಟು (ಗೂಳಿ ಬೆನ್ನಟ್ಟುವ ಸ್ಪರ್ಧೆ)ಯಲ್ಲಿ ಗೂಳಿಗಳು ತಿವಿದಿದ್ದರಿಂದ ರಾಜಸ್ಥಾನದ ಮೂಲದ ವ್ಯಕ್ತಿ ಸೇರಿದಂತೆ ಮೂವರು ಸಾವನ್ನಪ್ಪಿ, 75 ಜನರು ಗಾಯಗೊಂಡ ಘಟನೆ ನಡೆದಿದೆ. ರಾಜಸ್ಥಾನದ ಐಸ್ ಕ್ರೀಮ್ ಮಾರಾಟಗಾರ ಜಮ್ಮುಲಾಲ್ ಲಾಲ್ಜಿ, ನಟ್ಟರ್ ಮಂಗಲಂನ ರಾಮನಾಥನ್ ಮತ್ತು ಪುದುಕ್ಕೊಟ್ಟೈನ ರಾಜೇಂದ್ರನ್ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಪರ್ಧೆಯಲ್ಲಿ 600ಕ್ಕೂ ಹೆಚ್ಚು ಗೂಳಿಗಳನ್ನು ಬಿಡಲಾಗಿತ್ತು, ಈ ವೇಳೆ ಪ್ರೇಕ್ಷಕರಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿದೆ. ಈ ಘಟನೆಯಲ್ಲಿ ಪ್ರೇಕ್ಷಕರು ಮತ್ತು ಗೂಳಿಗಳನ್ನು ಪಳಗಿಸುವವರು ಸೇರಿದಂತೆ ಕನಿಷ್ಠ 75 ಜನರು ಗಾಯಗೊಂಡಿದ್ದಾರೆ ಮತ್ತು ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ 8 ಜನರನ್ನು ವಿಶೇಷ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಗಳ ಗುರುತು ತಿಳಿದುಬಂದಿಲ್ಲ.

ಘಟನೆಯ ಬಗ್ಗೆ ಮಾಹಿತಿ ಸಿಕ್ಕಿ ತಕ್ಷಣ ತನಿಖೆಗಾಗಿ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಬಂತ್ತು. ಸ್ಪರ್ಧೆಯ ಸ್ಥಳದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಸರಿಯಾಗಿ ಮಾಡಲಾಗಿತ್ತೆ ಎಂದು ತಿಳಿಯಲು ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಒಟ್ಟು 112 ಗೂಳಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಮಾಸಿ ಮಾಗಂ ಉತ್ಸವದ ಅಂಗವಾಗಿ ಮಂಜುವಿರಟ್ಟು ಗೂಳಿ ಬೆನ್ನಟ್ಟುವ ಸ್ಪರ್ಧೆಯು ವರ್ಷದಿಂದ ವರ್ಷಕ್ಕೆ ಜನರನ್ನು ಆಕರ್ಷಿಸುತ್ತಿದೆ. ಆದರೆ ಸೋಮವಾರದ ಘಟನೆಯು ಜನಪ್ರಿಯ ಉತ್ಸವದ ಸುರಕ್ಷತೆ ಸಂಬಂಧಿಸಿದಂತೆ ಕಳವಳವನ್ನು ಉಂಟು ಮಾಡಿದೆ.

Leave a Reply

Your email address will not be published. Required fields are marked *

error: Content is protected !!