ಉದಯವಾಹಿನಿ  ದೇವನಹಳ್ಳಿ: ತಾಲ್ಲೂಕಿನ ಸಾದಹಳ್ಳಿ ಸಮೀಪದ ಸ್ವೀಸ್ ಟೌನ್ ನಲ್ಲಿ  ಗ್ಲೋಬಲ್ ಸಿಇಓ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ‘ಟಾಪ್ ಸಿಇಓ ಅಂಡ್ ಹೂಡಿಕೆದಾರರ ಶೃಂಗಸಭೆ’ಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಆಹಾರ ಸಚಿವ ಕೆ.ಎಚ್.ಮುನಿಯಪ್ಪರವರು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ‘ದೇಶದ ಅಭಿವೃದ್ಧಿಗೆ ಉದ್ಯೋಗದಾತರ ಕೊಡುಗೆ ಅನನ್ಯವಾಗಿದೆ. ಉದ್ಯೋಗಗಳನ್ನು ಯುವ ಸಮೂಹಕ್ಕೆ ಒದಗಿಸುವ ಮೂಲಕ ಕುಟುಂಬ, ಸಮಾಜ, ದೇಶದ ಅಭಿವೃದ್ಧಿಯಲ್ಲಿ ಅತ್ಯಂತ ಪ್ರಧಾನ ಪಾತ್ರವಹಿಸಿರುವ ನಿಮ್ಮ ಮಧ್ಯೆ ಕರ್ನಾಟಕ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿರುವುದು ಸಂತಸದ ವಿಷಯವಾಗಿದೆ ಜಾಗತಿಕ ಮಟ್ಟದಲ್ಲಿ ಕರ್ನಾಟಕ ರಾಜ್ಯ ಗುರುತಿಸುವಲ್ಲಿ ನಿಮ್ಮ ಪಾತ್ರವೂ ಅಧಿಕವಾಗಿದ್ದು, ದೇಶದ ರಾಜ್ಯದ ಆರ್ಥಿಕತೆಯ ಹಿಂದಿನ ಪ್ರೇರಣೆ ಶಕ್ತಿಯಾಗಿದ್ದೀರಿ, ಕೈಗಾರಿಕೆಗಳ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ನಿಮ್ಮ ನಾಯಕತ್ವವು ಮುಂಚೂಣಿಯಲ್ಲಿದೆ ವಿಶ್ವದ ಗಮನ ಸೆಳೆಯುತ್ತಿರುವ ಕರ್ನಾಟಕ ರಾಜ್ಯದ ಸಾಕಷ್ಟು ಅಭಿವೃದ್ಧಿ ಕೆಲಸಗಳು ಪೂರ್ಣಗೊಂಡಿರುವುದು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಇದರಿಂದಾಗಿ ದಕ್ಷಿಣ ಭಾರತದಲ್ಲೇ ಪ್ರಗತಿಯ ಶಕೆ ಪ್ರಾರಂಭವಾಗಿದೆ. ಈ ಪ್ರಗತಿಯ ತೇರನ್ನು ಎಲ್ಲರೂ ಒಂದಾಗಿ ಸರ್ವರ ಒಳಿತಿಗಾಗಿ ಮುನ್ನೆಡಿಸೋಣ ಹಾಗೂ ಗ್ರಾಮೀಣ ಬಾಗದಲ್ಲಿ ಇಂದಿಗೂ ಗುಣಮಟ್ಟದ ಶಿಕ್ಷಣದ ಸವಾಲು ಎದುರಿಸುತ್ತಿದ್ದೇವೆ. ಶಿಕ್ಷಣದಿಂದ ಮಾತ್ರ ರಾಜ್ಯದ ಉಜ್ವಲ ಭವಿಷ್ಯ ಅಡಗಿದೆ. ರಾಜ್ಯ ಸರ್ಕಾರವೂ ಈಗಾಗಲೇ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗಿದ್ದು, ಕೈಗಾರಿಕೆಗಳ ಮುಂಚೂಣಿಯ ನಾಯಕರ ನೇತೃತ್ವದಲ್ಲಿ ಮತ್ತಷ್ಟು ಕೌಶಲ್ಯಗಳ ಲಭ್ಯತೆ, ತರಬೇತಿಯ ಮೂಲಕ ಯುವ ಸಮೂಹವನ್ನೇ ಬಲಿಷ್ಠ ಮಾಡಬೇಕಿದೆ’ ಎಂದರು.
ಜಿಲ್ಲಾಧಿಕಾರಿ ಶಿವಶಂಕರ ಎನ್, ಜಿಲ್ಲಾ ಪಂಚಾಯಿತಿ ಸಿಇಓ ಅನುರಾಧ, ಗಣ್ಯರಾದ ಹೇಮಾ ಮಾಲೀನಿ, ಸುಧಾಕರ್ ರಾವ್, ತಹಶೀಲ್ದಾರ್ ಎಚ್.ಬಾಲಕೃಷ್ಣ ಸೇರಿದಂತೆ ವಿವಿಧ ಕಂಪನಿಯ ಮುಖ್ಯಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!