
ಉದಯವಾಹಿನಿ, ದೇವದುರ್ಗ : ತಾಲೂಕಿನ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ಪದಾಧಿಕಾರಿಗಳ ಆಯ್ಕೆ ಕುರಿತು ರಾಜ್ಯ ಅಧ್ಯಕ್ಷರಾದ ಟಿ.ಆರ್ ತುಳಸಿ ರಾಮ್ ಅವರ ಆದೇಶದ ಮೇರೆಗೆ ಹಾಗೂ ರಾಯಚೂರು ಜಿಲ್ಲೆ ಯುವ ಘಟಕ ಅಧ್ಯಕ್ಷರಾದ ಶರಣಬಸವ ನಾಯಕ ಜಾನೇಕಲ್ ಇವರ ಅನುಮತಿಯ ಮೇರೆಗೆ ದೇವದುರ್ಗ ತಾಲೂಕಿನಲ್ಲಿ ಯುವ ಘಟಕವನ್ನು ಸ್ಥಾಪಿಸಿ ತಾಲೂಕಿನಲ್ಲಿ ಸಮಾಜಕ್ಕಾಗಿ ಹಗಲಿರುಳು ದುಡಿದ ಯುವ ಹೋರಾಟಗಾರರು ಸಮಾಜದ ಚಿಂತಕರು ಸಮಾಜದ ಕುಲಬಾಂಧವರು ಸಮಾಜದ ಏಳಿಗೆಗಾಗಿ ಯುವ ಘಟಕವನ್ನು ಸ್ಥಾಪಿಸಲು ದಿನಾಂಕ 30/07/23 ರಂದು ಬೆಳ್ಳಿಗೆ 10 ಗಂಟೆಗೆ ತಾಲೂಕಿನ ಪ್ರವಾಸ ಮಂದಿರದಲ್ಲಿ ಸಭೆಯನ್ನು ಕರೆಯಲಾಗಿದೆ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ರಾಜ್ಯ ನಿರ್ದೇಶಕರಾದ ಸಚ್ಚಿದಾನಂದ ನಾಯಕ ಅವರು ತಿಳಿಸಿರುತ್ತಾರೆ ಈ ಸಭೆಯಲ್ಲಿ ಎಲ್ಲರೂ ಪಾಲ್ಗೊಂಡು ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ ವಿನಂತಿ.
